ITBP Recruitment 2024: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಉದ್ಯೋಗಾವಕಾಶ
ITBP Recruitment 2024: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP), ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಇದನ್ನು 24ನೇ ಅಕ್ಟೋಬರ್ 1962 ರಂದು ಸ್ಥಾಪಿಸಲಾಯಿತು. ಇದೊಂದು ಎತ್ತರದ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ಗಡಿ ಕಾವಲು ಪೊಲೀಸ್ ಪಡೆಯಾಗಿದೆ. ಲಡಾಖ್‌ನ ಕರಕೋರಂ ಪಾಸ್‌ನಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ಭಾರತ-ಚೀನಾ ಗಡಿಯ 3,488 ಕಿಮೀ ವ್ಯಾಪ್ತಿಯ ಗಡಿ ಕಾವಲು ಕರ್ತವ್ಯಕ್ಕಾಗಿ ITBP ಅನ್ನು ನಿಯೋಜಿಸಲಾಗಿದೆ.
ಪ್ರಸ್ತುತ ITBP ಖಾಲಿ ಇರುವ ತಾತ್ಕಾಲಿಕ Sub-Inspector (Staff Nurse), Assistant Sub-Inspector (Pharmacist) and Head Constable (Midwife) ಹುದ್ದೆಗೆ ಅರ್ಹ ಹಾಗೂ ಆಸಕ್ತ ಪುರುಷ / ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಹಾಗೆಯೇ ಲೇಖನದ ಕೊನೆಯಲ್ಲಿ ಕೊಟ್ಟಿರುವ ITBP Recruitment 2024 Notification ನಲ್ಲಿಯೂ ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ನಾವು ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ತಮ್ಮ ಕನಸಿನ ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮ Careerlive.in ವೆಬ್ಸೈಟ್ ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಈಗಾಗಲೇ ಹಲವು ಜನರು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ Whatsapp Group ಮತ್ತು Whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು Whatsapp Group ಹಾಗೂ Channel and Telegram Channel ಗೆ ಸೇರಿಕೊಳ್ಳಿ.
Basic information about ITBP Limited Recruitment 2024
Post Name | Sub-Inspector (Staff Nurse), Assistant Sub-Inspector (Pharmacist), Head Constable (Midwife) |
Organization | Indo Tibetan Border Police Force |
Number of Posts | 29 |
Qualification | General Nursing and Mid-Wifery, Diploma in Pharmacy, Nursing Midwifery Course |
Application Mode | Online |
Interview Method | PET, Written Test, Interview |
Experience | 3 Years |
Place of Posting | India China Border |
Salary | Rs. 25,500 – 1,12,400/- |
Age Limit | 30 years |
Last Date | 28th July 2024 |

Eligibility Criteria to Apply for ITBP Limited Recruitment 2024
ITBP ತನ್ನ ಇಲಾಖೆಯಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಾದ Sub-Inspector (Staff Nurse), Assistant Sub-Inspector (Pharmacist) and Head Constable (Midwife) ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಹಾಗೂ ಇನ್ನಿತರ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.
Qualification:
Sub-Inspector (Staff Nurse), ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2, PUC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪಡೆದಿರಬೇಕಾಗುತ್ತದೆ.
ಅಭ್ಯರ್ಥಿಯು ಇದರೊಂದಿಗೆ ಮಾನ್ಯತೆ ಪಡೆದ ಸಂಸ್ಥೆ/ ವಿದ್ಯಾನಿಲಯದಲ್ಲಿ General Nursing and Mid-Wifery ತರಬೇತಿಯನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕಾಗುತ್ತದೆ. ಮತ್ತು ಅಭ್ಯರ್ಥಿಯು ಕೇಂದ್ರ ನರ್ಸಿಂಗ್ ಕೌನ್ಸಿಲ್ ಅಥವಾ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಾಯಿಸಲ್ಪಟ್ಟಿರಬೇಕಾಗುತ್ತದೆ. Make Money Online Apps.
Assistant Sub-Inspector (Pharmacist), ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ತತ್ಸಮಾನದಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದೊಂದಿಗೆ ಹಿರಿಯ ಮಾಧ್ಯಮಿಕ ಪ್ರಮಾಣೀಕರಣ (10+2 or PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ.
ಇದರೊಂದಿಗೆ ಔಷದಾಲಯ (Pharmacy)ಕ್ಕೆ ಸಂಬಂಧಿಸಿದ ವಿಷಯದಲ್ಲಿ Diploma in Pharmacy ಯನ್ನು ಸರಕಾರದಿಂದ ಮಾನ್ಯತೆ ಪಡೆದ ಕೇಂದ್ರ / ರಾಜ್ಯ ಶಿಕ್ಷಣ ಸಂಸ್ಥೆ ಅಥವಾ ಕೇಂದ್ರ / ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟ ಶಿಕ್ಷಣ ಸಂಸ್ಥೆಯಿಂದ ಪಡೆದಿರಬೇಕಾಗುತ್ತದೆ. ಹಾಗೆಯೇ ಅಭ್ಯರ್ಥಿಯು ಫಾರ್ಮಸಿ ಕಾಯಿದೆ 1948 ರ ಅಡಿಯಲ್ಲಿ ಫಾರ್ಮಾಸಿಸ್ಟ್ ಆಗಿ ನೊಂದಾಯಿಸಲ್ಪಟ್ಟಿರಬೇಕಾಗುತ್ತದೆ.
Head Constable (Midwife), ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬುದಾಗಿದೆ. ಈ ಹುದ್ದೆಗೂ ಸಹ ಅಭ್ಯರ್ಥಿಗಳು SSLC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ನಿಂದ ಪಡೆದು , ಅದರೊಂದಿಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ Auxiliary Nursing Midwifery Course ತರಬೇತಿ ಪಡೆದು ಅದರಲ್ಲಿ ಉತ್ತೀರ್ಣನಾಗಿರಬೇಕಾಗುತ್ತದೆ.
ಹಾಗೆಯೇ ಮಹಿಳಾ ಅಭ್ಯರ್ಥಿಯು ಕೇಂದ್ರ ಅಥವಾ ರಾಜ್ಯ ಸರ್ಕಾರದ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಾಯಿಸಲ್ಪಟ್ಟಿರಬೇಕಾಗುತ್ತದೆ
Age Limitation:
Sub-Inspector (Staff Nurse), ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21 ವರ್ಷದಿಂದ 30 ವರ್ಷದೊಳಗಿರಬೇಕಾಗುತ್ತದೆ.
Assistant Sub-Inspector (Pharmacist), ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 28 ವರ್ಷದೊಳಗಿನವರಾಗಿರಬೇಕಾಗುತ್ತದೆ.
Head Constable (Midwife) ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳ ವಯೋಮಿತಿಯು 18 ರಿಂದ 25 ವರ್ಷದೊಳಗಿರಬೇಕಾಗುತ್ತದೆ.
Age Relaxations:
Sub-Inspector, Assistant Sub-Inspector, Head Constable ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC, ST, OBC, ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ ಗರಿಷ್ಢ ವಯೋಮಿತಿಯಲ್ಲಿನ ಸಡಿಲಿಕೆಯ ಬಗ್ಗೆ ITBP ಇಲಾಖೆಯು ತನ್ನ ನಿಯಮಗಳ ಪ್ರಕಾರ ಸ್ವಲ್ಪ ಮಟ್ಟಿನ ಸಡಿಲಿಕೆಯನ್ನು ನೀಡುವುದಾಗಿಯೂ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಬಗೆಗಿನ ಮಾಹಿತಿಯನ್ನು ITBP Recruitment 2024 Notification ನ್ನು ಓದಿ ತಿಳಿದುಕೊಳ್ಳಬಹುದಾಗಿದೆ.
Experience:
Sub-Inspector (Staff Nurse) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 3 ವರ್ಷಗಳು ನರ್ಸ್ ಆಗಿ ಕೆಲಸ ಮಾಡಿದ ಅನುಭವವನ್ನು ಪಡೆದಿರಬೇಕಾಗುತ್ತದೆ.
Required Document and Certificates
- Adhar Card
- Voter ID
- Educational Qualification Certificates
- Experience Certificates
- NOC Certificates
- EWS Certificates
- Birth Certificate / Birth Proof Certificates
- Caste / Community Certificate
- Military Ex-Service Man Certificates
- Recent Passport size Photographs
Other Important Instructions:
- ಹುದ್ದೆಗೆ ಅರ್ಜಿ ಸಲ್ಲಿಸುವ SC, ST, Female and Ex-Servicemen ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
- ಅಭ್ಯರ್ಥಿಗಳು Central/ State Government / Autonomous/ Statutory Bodies/ Public Sector Undertaking ಇತ್ಯಾದಿ ಇಲಾಖೆಗಳಲ್ಲಿ ಕೆಲಸ ಮಾಡಿದ ಉದ್ಯೋಗಿಗಳಾಗಿದ್ದಲ್ಲಿ ಅಂತಹವರು No Objection Certificate(NOC) ನ್ನು ಒದಗಿಸಬೇಕಾಗುತ್ತದೆ.
- ಯಾವುದೇ ಮಹಿಳಾ ಅಭ್ಯರ್ಥಿಗಳು ಅರ್ಜಿಶುಲ್ಕ ವನ್ನು ಪಾವತಿ ಮಾಡುವ ಅಗತ್ಯವಿರುವುದಿಲ್ಲ
- ಅರ್ಜಿ ಸಲ್ಲಿಸುವ ಮುನ್ನ ವೆಬ್ಸೈಟ್ ನ ಬಲಭಾಗದಲ್ಲಿರುವ How to Register ಬಟನ್ ನಲ್ಲಿ ಸೂಚಿಸಿದ ಮಾಹಿತಿಗಳನ್ನು ವಿವರವಾಗಿ ಓದಿಕೊಳ್ಳಬೇಕಾಗುತ್ತದೆ.
- ಅಭ್ಯರ್ಥಿಯು ಪರೀಕ್ಷೆಯ ಸಮಯದಲ್ಲಿ ಯಾವುದೇ Notification ನಲ್ಲಿ ತಿಳಿಸಿದ ರೀತಿಯ ದುಷ್ಕೃತ್ಯಗಳಲ್ಲಿ ಪಾಲ್ಗೊಂಡಿದ್ದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿ ರದ್ದುಗೊಳಿಸಲಾಗುವುದು
- ಅಭ್ಯರ್ಥಿಗಳಿಗೆ Physical Efficiency Test(PET) ಮತ್ತು Physical Standard Test(PST) ನಡೆಸುವಾಗ download ಮಾಡಿದ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ಅಭ್ಯರ್ಥಿಗಳು ನೇಮಕಾತಿಯ ಪ್ರತೀ ಹಂತದಲ್ಲೂ ಅರ್ಜಿಸಲ್ಲಿಸಲು ಬಳಸಿದ ಪಾಸ್ಪೋರ್ಟ್ ಸೈಸ್ ಫೋಟೋವನ್ನು ತೆಗೆದುಕೊಂಡು ಬರಬೇಕಾಗುತ್ತದೆ.
- ಅಭ್ಯರ್ಥಿಗಳು Original Documents Verification ಹಂತವನ್ನು ಮುಗಿಸಿದ ನಂತರವೇ ಅಭ್ಯರ್ಥಿಗಳ Detailed Medical Examination ನ್ನು ಮಾಡುತ್ತಾರೆ.
- ಅರ್ಹ ಅಭ್ಯರ್ಥಿಗಳ Admit card ನ್ನು https://recruitment.itbpolice.nic.in ನಲ್ಲಿ ಸೂಚಿಸಿದ ದಿನಾಂಕದಂದು ಡೌನ್ಲೋಡ್ ಮಾಡಿ ಪಡೆದುಕೊಳ್ಳಬಹುದಾಗಿದೆ.
- ಅರ್ಜಿ ಶುಲ್ಕವಲ್ಲದೆ ಯಾವುದೇ ಹಂತದಲ್ಲಿಯೂ ITBP ಯಾವುದೇ ರೀತಿಯ ಹಣ ಅಥವಾ ಶುಲ್ಕವನ್ನು ನೀಡಲು ಒತ್ತಾಯಿಸುವುದಿಲ್ಲ.
- ಆಯ್ಕೆಗೊಂಡ ಅಭ್ಯರ್ಥಿಗಳು 10 ವರ್ಷಗಳ ಕಾಲ ITBP ನಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ 10 ವರ್ಷಕ್ಕಿಂತ ಮುಂಚಿತವಾಗಿ ಸೇವೆಯಿಂದ ರಾಜೀನಾಮೆ ನೀಡಲು ಅವನು/ಅವಳು ಬಯಸಿದರೆ, ಆಗ ಅವನು/ಅವಳು ಹುದ್ದೆಗೆ ಸೂಚಿಸಿದ 3 ತಿಂಗಳ ವೇತನ ಮತ್ತು ಭತ್ಯೆಗಳು ಅಥವಾ ಅವನು/ಅವಳಿಗೆ ನೀಡಿದ ತರಬೇತಿಯ ವೆಚ್ಚಕ್ಕೆ ಸಮಾನವಾದ ಮೊತ್ತವನ್ನು ಹಿಂದಿರುಗಿಸಬೇಕಾಗುತ್ತದೆ.
- ಅಭ್ಯರ್ಥಿಗಳಿಗೆ ನೇಮಕಾತಿ ಆಯ್ಕೆಯ ಸಮಯದಲ್ಲಿ ಯಾವುದೇ Travelling allowance (TA) / Daily allowance (DA)ನ್ನು ನೀಡಲಾಗುವುದಿಲ್ಲ
- ವಿಕಲಾಂಗ ಅಭ್ಯರ್ಥಿಗಳು ITBP ನ ಪರೀಕ್ಷೆ ಬರೆಯಲು ಅನರ್ಹರಾಗಿರುತ್ತಾರೆ
- ಅಭ್ಯರ್ಥಿಗಳು ಯಾವುದೇ ಸಂದೇಹ ಹಾಗೂ ಪ್ರಶ್ನೆಗಳಿಗೆ ಈ ಕೆಳಗಿನ ಲಿಂಕ್ https://recruitment.itbpolice.nic.in ನಲ್ಲಿ ಇ-ಮೇಲ್ ಮೂಲಕ ಮತ್ತು ಕೆಳಗಿನ ದೂರವಾಣಿ ಮೂಲಕ ತಿಳಿದುಕೊಳ್ಳಬಹುದಾಗಿದೆ
ದೂರವಾಣಿ : 011-24369482 ಮತ್ತು 24369483
Selection Process of ITBP Limited Recruitment 2024
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲನೇಯ ಹಂತದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳಾದ ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಹಾಗೂ ವೈಯುಕ್ತಿಕ ಕೌಶಲ್ಯಗಳು ಇವೆಲ್ಲವೆನ್ನಾ ಗಣನೆಗೆ ತೆಗೆದುಕೊಂಡು Recruitment Test ಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ Recruitment Test ಗೆ ಬೇಕಾದ Admit cards ಆನ್ ಲೈನ್ ಮೂಲಕ ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದು.
Examination Process
ಆಯ್ಕೆಗೊಂಡ ಅಭ್ಯರ್ಥಿಗಳನ್ನು ಈ ಕೆಳಗಿನ ವಿಧಾನದ ಮೂಲಕ ಆಯ್ಕೆ ಮಾಡಲಾಗುವುದು
Phase- I
- Physical Efficiency Test and Physical Standard Test
- Written Examination
Phase –II
- Verification of Original Documents and Practical Examination
- Detailed Medical Examination
- Review Medical Examination
ಹೀಗೆ ಎಲ್ಲಾ ಹಂತಗಳಲ್ಲಿ ಆಯ್ಕೆಗೊಂಡ ಅರ್ಹ ಅಭ್ಯರ್ಥಿಗಳನ್ನು ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.
How to Apply for ITBP Limited Recruitment 2024
ಮೇಲೆ ಸೂಚಿಸಿದ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ITBP ಇಲಾಖೆಯ ಅಧೀಕೃತ ಜಾಲತಾಣವಾದ https://recruitment.itbpolice.nic.in ನಲ್ಲಿ, ಇಲಾಖೆಯ ಅಧಿಸೂಚನೆಯಲ್ಲಿನ ಎಲ್ಲಾ ಅವಶ್ಯ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು, ಇ-ಮೇಲ್ ಐಡಿ, ಫೋನ್ ನಂಬರ್ ನಂತಹ ಸರಿಯಾದ ದಾಖಲೆಗಳನ್ನು ಒದಗಿಸುವುದರೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೊದಲಿಗೆ ಅಭ್ಯರ್ಥಿಗಳು ಮೇಲೆ ಸೂಚಿಸಿದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬೇಕಾಗುತ್ತದೆ.
ಅಭ್ಯರ್ಥಿಗಳು ಹೊಸಬರಾಗಿದ್ದಲ್ಲಿ ಮೇಲೆ ಸೂಚಿಸಿದ ವೆಬ್ ಸೈಟ್ ಲಿಂಕ್ ಮೂಲಕ ITBP Recruitment Website ನಲ್ಲಿ New User Registration ಬಟನ್ ಅನ್ನು ಕ್ಲಿಕ್ ಮಾಡಿ, ಸರಿಯಾದ ಇ-ಮೇಲ್ ಐಡಿಯೊಂದಿಗೆ Register ಮಾಡಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಈಗಾಗಲೇ Register ಮಾಡಿಕೊಂಡಿದ್ದರೆ ಅದೇ ಇ-ಮೇಲ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಬೇಕಾಗುತ್ತದೆ.
ಹೊಸ User Registration ಆಗಿದ್ದಲ್ಲಿ ನಿಮ್ಮ ಇ-ಮೇಲ್ ಐಡಿ ಗೆ ITBP ಯು ಕಳುಹಿಸಿದ Verification ಮೇಲ್ ನ ಮೂಲಕ ಮತ್ತೊಮ್ಮೆ ಲಾಗಿನ್ ಆದ ಕೂಡಲೇ Application Portal ತೆರೆದುಕೊಳ್ಳುತ್ತದೆ. ಅಲ್ಲಿರುವ Live ಬಟನ್, ಆಯಾಯ ಹುದ್ದೆಗಳಿಗನುಸಾರವಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.
ಅಭ್ಯರ್ಥಿಗಳು ಸರಿಯಾದ ದಾಖಲೆಗಳನ್ನು ಒದಗಿಸಿ Submit ನ್ನು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ ಕೊನೆಯಲ್ಲಿ ಅಭ್ಯರ್ಥಿಗಳು Application Form ನ್ನು download ಮಾಡಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳು ನೋಟಿಫಿಕೇಷನ್ ನೊಂದಿಗಿರುವ ANNEXURE ‘I’, II, II-A, III, IV, V, VI, VII ಫಾರ್ಮ್ ನ್ನು ಭರ್ತಿ ಮಾಡಿ ಆನ್ ಲೈನ್ ಅರ್ಜಿ ಅಥವಾ ದಾಖಲೆಗಳನ್ನು ಸಲ್ಲಿಸುವಾಗ ಬಳಸಬಹುದಾಗಿದೆ.
ಇನ್ನು ಅರ್ಜಿ ಶುಲ್ಕವನ್ನು Online Payment Gateway System ಮೂಲಕ https://recruitment.itbpolice.nic.in ನಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ದಿನಾಂಕ 28-07-2024 ರ 11:59 PM ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
Application Fee:
ಮೇಲಿನ ಎಲ್ಲಾ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು SC,ST,Female, Ex-Servicemen ಗಳಾಗಿದ್ದಲ್ಲಿ ಅವರಿಗೆ ಯಾವುದೇ ಬಗೆಯ ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ.
ಆದರೆ ಅರ್ಜಿ ಸಲ್ಲಿಸುವವರು Male/ Unreserved(UR), OBC and Economically Weaker Section(EWS) ಅಭ್ಯರ್ಥಿಗಳಾಗಿದ್ದಲ್ಲಿ ಅವರು Sub-Inspector (Staff Nurse) ಹುದ್ದೆಗೆ 200/- ರೂಗಳ ಶುಲ್ಕಪಾವತಿ ಮಾಡಬೇಕಾಗುತ್ತದೆ. ಹಾಗೆಯೇ Assistant Sub-Inspector (Pharmacist) ಹುದ್ದೆಗೆ 100/- ರೂಗಳ ಶುಲ್ಕಪಾವತಿ ಮಾಡಬೇಕಾಗುತ್ತದೆ.
ಇನ್ನು Head Constable (Midwife) ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ.
Important Links ITBP Recruitment 2024
ITBP Recruitment 2024 Notification | Download Now |
ITBP Official Website | Visit Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive Telegram Channel | Join Now |
FAQ
Q: What is the last date for application submission for the post of Sub-Inspector (Staff Nurse), Assistant Sub-Inspector (Pharmacist) and Head Constable (Midwife)?
A: 28th July 2024
Q: How many years of experience must candidates have for the post of Sub-Inspector (Staff Nurse)?
A: 3 Year
Q: What is the place of posting for Sub-Inspector (Staff Nurse), Assistant Sub-Inspector (Pharmacist) and Head Constable (Midwife)?
A: India- China Border
Q: What is the full form of ITBP Force?
A: Full form of ITBP is Indo-Tibetan Border Police Force