BMRCL Recruitment 2024: Jobs in Bangalore Metro Rail, Recruitment of Station Controller or Train Operator, Career in Namma Metro, Eligibility, Qualification, Salary, How to Apply?

Share the Info

BMRCL Recruitment 2024: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ 

BMRCL Recruitment 2024: ಬೆಂಗಳೂರು ಮೆಟ್ರೋ ಎಂಬುದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದೆ. ಇದು Bangalore Metro Railway ಯೋಜನೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ನಿರ್ವಹಿಸುವ ವಿಶೇಷ ಉದ್ದೇಶದ ಸಾರಿಗೆ ವಾಹಕವಾಗಿದೆ. “ನಮ್ಮ ಮೆಟ್ರೋ”(Namma Metro)  ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ಮೆಟ್ರೋ, ಬೆಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಿಗೆ ಸುರಕ್ಷಿತ, ತ್ವರಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಾ ಬಂದಿದೆ. 

ಇಂತಹ ಹೆಮ್ಮೆಯ ಮೆಟ್ರೋದಲ್ಲಿ, ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿನ ಖಾಲಿ ಇರುವ ಹುದ್ದೆಗಳಿಗೆ(Career in Metro) ಅರ್ಹ ಮತ್ತು ಆಸಕ್ತ ಮಾಜಿ ಸೈನಿಕರಿಂದ, ಗುತ್ತಿಗೆ ಆಧಾರದ ಮೇರೆಗೆ (Contract Basis) ಅರ್ಜಿ ಆಹ್ವಾನಿಸಲಾಗಿದೆ. 5 ವರ್ಷದ ಒಪ್ಪಂದದ ಮೇರೆಗೆ ಅಭ್ಯರ್ಥಿಯು ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಒಪ್ಪಂದವನ್ನು ಅಭ್ಯರ್ಥಿಯ ಕಾರ್ಯನಿರ್ವಹಣೆಯ ಆಧಾರದ ಮೇಲೆ ಮುಂದುವರಿಸಲಾಗುತ್ತದೆ. ಈ ನೇಮಕಾತಿಯು ವಿಶೇಷವಾಗಿ ಮಾಜಿ ಸೈನಿಕರಿಗಾಗಿಯೇ ರಚಿಸಲಾಗಿದೆ. 

Careerlive Telegram Channel
Careerlive Whatsapp Channel
Careerlive Whatsapp Group

ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ Whatsapp Group ಹಾಗೂ Whatsapp Channel ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ನಮ್ಮ ಈ CAREERLIVE ವೆಬ್ ಸೈಟ್ ಗೆ ಹೊಸಬರಾಗಿದ್ದರೆ ಈಗಲೇ ನಮ್ಮ Whatsapp Group ಹಾಗೂ Whatsapp Channelಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.

Basic information about BMRCL Recruitment 2024

Post nameStation Controller / Train Operator (SC/TO)
OrganizationBangalore Metro Rail Corporation Limited (BMRCL)
Notification Date14/06/2024
Notification NumberBMRCL/HR/0002/O&M/2024/ C-41955
Number of vacancies69
Application ModeOnline
QualificationSSLC/Matriculation and Diploma
Interview MethodWritten test, Psychometric test, Medical Fitness Test
EligibilityMust be Retired from Indian Military Service
Application FeesNone
SalaryRs.35,000 /- to Rs.85,660 /-
Age Limit45 years
Last date10th July 2024

BMRCL Recruitment 2024

Eligibility Criteria to apply for BMRCL Recruitment 2024

Namma Metro ಬೆಂಗಳೂರು ಇಲ್ಲಿ Station Controller / Train Operator (SC/TO) ಹುದ್ದೆಗೆ BMRCL Recruitment 2024 ನಲ್ಲಿ ಅರ್ಜಿ ಸಲ್ಲಿಸುವ ಮಾಜಿ ಸೈನಿಕ ಅಭ್ಯರ್ಥಿಗಳು ಕಡ್ಡಾಯವಾಗಿ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದ ಈ ಕೆಳಗಿನ ಆ ಎಲ್ಲಾ ಅರ್ಹತೆಯನ್ನು ಹೊಂದಿರಬೇಕು. ಮತ್ತು ಅದಕ್ಕೆ ಸೂಕ್ತ ದಾಖಲೆಗಳನ್ನು ಸಹ ಒದಗಿಸಬೇಕಾಗುತ್ತದೆ. 

Educational Qualification:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮಾಜಿ ಸೈನಿಕ ಅಭ್ಯರ್ಥಿಯು ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು ಅಥವಾ ರಕ್ಷಣಾ ಸೇವೆ / ಘಟಕ (defence services / unit) ದಿಂದ 3 ವರ್ಷಗಳ ಡಿಪ್ಲೋಮಾವನ್ನು Electrical Engineering Or Electrical & Electronics Engineering / Telecommunications / Electronics & Communication Engineering / Electrical Power Systems / Industrial Electronics / Mechanical Engineering ದಲ್ಲಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕಾಗುತ್ತದೆ.

Age Limitation:

Station Controller / Train Operator (SC/TO) ಹುದ್ದೆಗೆ ಅರ್ಜಿ ಸಲ್ಲಿಸುವ ಮಾಜಿ ಸೈನಿಕ ಅಭ್ಯರ್ಥಿಗಳು ವಯೋಮಿತಿಗೆ ಸಂಬಂಧಪಟ್ಟಂತೆ BMRCL Recruitment 2024 Notification ನಲ್ಲಿ ತಿಳಿಸಿರುವಂತೆ ಗರಿಷ್ಠ 45 ವರ್ಷಗಳನ್ನು ಮೀರಿರಬಾರದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕಕ್ಕೆ ಸಂಬಂಧಪಟ್ಟಂತೆ Matriculation/High School Examination Certificate ನಲ್ಲಿ ದಾಖಲಾದ ಜನ್ಮ ದಿನಾಂಕ ಸರಿಯಾಗಿದೆಯೇ ಎಂದು ಪರಿಶೀಲಿಸಿ ಕಳುಹಿಸಬೇಕು ಅಥವಾ ಜನ ಪ್ರಮಾಣಪತ್ರವನ್ನು ಅಥವಾ Armed Forces ನಲ್ಲಿ ಸಲ್ಲಿಸಲಾದ ಸಮಾನವಾದ ಪ್ರಮಾಣ ಪತ್ರಗಳು ಇದ್ದಲ್ಲಿ ಅದನ್ನು ಸಹಾ ಅರ್ಜಿಯೊಂದಿಗೆ ಸಲ್ಲಿಸಬಹುದಾಗಿದೆ.

Other Conditions 

  • ಭಾರತೀಯ ನಾಗರೀಕನಿರಬೇಕು 
  • ಭಾರತದ ಭೂಸೇನೆ ಅಥವಾ ವಾಯು ಸೇನೆ ಅಥವಾ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ  ಹೊಂದಿರಬೇಕು. 
  • ಯಾವುದೇ ಕ್ರಿಮಿನಲ್ ಕೇಸ್ ನಲ್ಲಿ ಭಾಗಿಯಾಗಿರಬಾರದು
  • ನಿವೃತ್ತಿ ಹೊಂದಿದ ಸೂಕ್ತ ದಾಖಲೆಗಳನ್ನು ಹೊಂದಿರಬೇಕು. 
  • ಭಾರತದ ಎಲ್ಲಾ ಅಗತ್ಯ ಫೋಟೋ ಐಡಿ ದಾಖಲೆ ಹೊಂದಿರಬೇಕು. 

Required Document and Certificates to apply for BMRCL Recruitment 2024 

ಅಭ್ಯರ್ಥಿಗಳು ಅರ್ಜಿ ನಮೂನೆಯೊಂದಿಗೆ ಈ ಕೆಳಗೆ ತಿಳಿಸಿದ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಎಲ್ಲಾ ದಾಖಲೆಗಳು ಸ್ವಯಂ ಧೃಡೀಕೃತವಾಗಿರಬೇಕು. ನಕಲಿ ದಾಖಲೆ ಸಲ್ಲಿಸಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸುವ ಅಧಿಕಾರ ಇಲಾಖೆಗೆ ಇರುತ್ತದೆ. 

  • ಭರ್ತಿಗೊಳಿಸಿದ ಅಪ್ಲಿಕೇಷನ್ ಫಾರ್ಮ್ ನ ಪ್ರತಿ
  • ಆಧಾರ ಕಾರ್ಡ್
  • ವೋಟರ್ ಐಡಿ
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ವೃತ್ತಿ ಅನುಭವದ ಪ್ರಮಾಣ ಪತ್ರ
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

Selection Process of BMRCL Recruitment 2024

ಈ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ವಿಧಾನವು ನಾಲ್ಕು ಹಂತಗಳನ್ನೊಳಗೊಂಡಿದೆ – Written test, Psychometric test, Medical Fitness Test and Documents Verification. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 2 ವರ್ಷಗಳ ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. 

Written test:

ಅಭ್ಯರ್ಥಿಗಳ ಅರ್ಜಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ Written test ಗೆ ಕರೆಯಲಾಗುತ್ತದೆ. Written test ನಲ್ಲಿ ಅಭ್ಯರ್ಥಿಯು General Knowledge, Reasoning and Analytics ಮತ್ತು Tech Proficiency ಎಂಬ ವಿಷಯಗಳನ್ನು ಒಳಗೊಂಡ ಸುಮಾರು 100 ಅಂಕಗಳ ಪ್ರಶ್ನೆಗಳನ್ನು 120 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕಾಗಿ ¼ ಅಂಕಗಳನ್ನು ಮೈನಸ್ ಮಾಡಲಾಗುತ್ತದೆ. ಈ Written test ನ್ನು 5th August 2024 ರಂದು Zilla Sainik Board, Bengaluru ನಲ್ಲಿ ನಡೆಸಲಾಗುವುದು. 

ಈ ಬಗೆಗಿನ ಮಾಹಿತಿಯನ್ನು ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳ ಮಾಹಿತಿಯನ್ನು E-mail, SMS ಮತ್ತು website ನಲ್ಲಿ ನೀಡಲಾಗುವುದು ಹಾಗೂ ಇದರೊಂದಿಗೆ BMRCL Admit Card (Metro Admit Card) ಬಗೆಗಿನ ಮಾಹಿತಿಯನ್ನು ನೀಡಲಾಗುವುದು. ಒಂದು ವೇಳೆ ಇಬ್ಬರು ಅಭ್ಯರ್ಥಿಗಳು ಒಂದೇ ತರಹದ ಅಂಕಗಳನ್ನು ಗಳಿಸಿದರೆ ಆಗ ವಯೋಮಿತಿ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಾಗುತ್ತದೆ. ಅಂದರೆ ಹೆಚ್ಚು ವಯೋಮಿತಿ ಹೊಂದಿರುವವರನ್ನು ಮೊದಲು ಆಯ್ಕೆಗೆ ಪರಿಗಣಿಸಲಾಗುವುದು.

Psychometric (Psychological) Test: 

Written test ನಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು psychometric test ಗೆ ಕರೆಯಲಾಗುವುದು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಮಾನಸಿಕವಾಗಿ ಸ್ವಸ್ಥ್ಯರಾಗಿರುವರೆ ಎಂಬುದನ್ನು ಖಚಿತಪಡಿಸಲು ನಡೆಸಲಾಗುವುದು. ಪ್ರಯಾಣಿಕರ ಹಿತದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳಿಗೆ psychometric test ನ್ನು ನಡೆಸಲಾಗುವುದು ಈ ಟೆಸ್ಟ್ ನಲ್ಲಿ ಅಭ್ಯರ್ಥಿಯು, ಆತ್ಮಹತ್ಯಾ ಪ್ರವೃತ್ತಿಗಳು ಅಥವಾ ಮಾನಸಿಕ ಅಸ್ವಸ್ಥತೆಯ ಇತಿಹಾಸವನ್ನು ಹೊಂದಿದ್ದರೆ ಅಥವಾ ಇತರ ಯಾವುದೇ ಸಮಸ್ಯೆಗಳಿಂದ ಬಳಲುತ್ತಿದ್ದರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು. 

Medical Fitness Test:

psychometric test ನಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು BMRCL ನಿಗದಿ ಪಡಿಸಿದ ಆಸ್ಪತ್ರೆಯಲ್ಲಿ ವೈದ್ಯಕೀಯ ಫಿಟ್ನೆಸ್ ಟೆಸ್ಟ್ ಗಾಗಿ ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಹುದ್ದೆಗೆ ಸಂಬಂಧಿಸಿದ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಅಭ್ಯರ್ಥಿಯು ಅರ್ಹನಾಗಿದ್ದಾನೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ವೈದ್ಯಕೀಯ ಫಿಟ್ನೆಸ್ ಟೆಸ್ಟ್ ನಲ್ಲಿ ಅಭ್ಯರ್ಥಿಗಳನ್ನು  Vision Checkup, Fundoscopy/ Refraction, ENT Checkup, Fasting Blood Sugar,  Serum Creatine, Urine Analysis, Chest X-Ray P.A View, ECG ಮುಂತಾದ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಈ Medical Fitness Test ನಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ Offer letter ನೀಡಲಾಗುವುದು.

Documents Verification:

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ  ಇದು ಕೊನೆಯ ಹಂತವಾಗಿರುತ್ತದೆ. ಈ ಹಂತದಲ್ಲಿ ಅಭ್ಯರ್ಥಿಗಳ ಎಲ್ಲಾ ದಾಖಲೆಗಳನ್ನು ಮರು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಯು ನಕಲಿ ಪ್ರಮಾಣ ಪತ್ರ / ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ಅಂತವರನ್ನು BMRCL ನಡೆಸುವ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.

ಈ ಮೇಲಿನ ಎಲ್ಲಾ ಪರೀಕ್ಷೆಗಳನ್ನು ಅಭ್ಯರ್ಥಿಗಳಿಗೆ ನಡೆಸಿದ ನಂತರ ಕೊನೆಯ ಆಯ್ಕೆ ಪಟ್ಟಿಯು ಸಿದ್ದವಾಗುತ್ತದೆ. ಹೀಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಹುದ್ದೆಯ ಬಗೆಗಿನ ವಿವರವಾದ ಮಾಹಿತಿಯನ್ನು ನೀವು ಕೆಳಗೆ ಕೊಟ್ಟಿರುವ BMRCL Recruitment 2024 Notification ನಲ್ಲಿ ಪಡೆಯಬಹುದು.

How to Apply for BMRCL Recruitment 2024

Namma Metro Bengaluru ಇಲ್ಲಿ Station Controller / Train Operator (SC/TO) ಹುದ್ದೆಗೆ ಅರ್ಜಿ ಸಲ್ಲಿಸುವ ex-military  ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು. ಅರ್ಜಿಯನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು BMRCL Recruitment Notification 2024 ನಲ್ಲಿ ಕೊಟ್ಟಿರುವ ಸಲಹೆ ಸೂಚನೆ ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.  ಅರ್ಜಿ ನಮೂನೆಯನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಬೇಕು  ಮತ್ತು ಪ್ರಿಂಟ್ ತೆಗೆದು ಅಂಚೆ ಮುಖಾಂತರ ಕೊಟ್ಟಿರುವ ಅಂಚೆ ವಿಳಾಸಕ್ಕೆ ಕಳುಹಿಸಬೇಕು. 

ಅಭ್ಯರ್ಥಿಗಳು ಅಧಿಸೂಚನೆ ಓದಿದ ನಂತರ ಮೊದಲು ಇಲಾಖೆಯ Official Website english.bmrc.co.in ನಲ್ಲಿ career ಅನ್ನು ಕ್ಲಿಕ್ಕಿಸಿ, ಅಲ್ಲಿ Notification Number  BMRCL/HR/0002/O&M/2024/ C-41955 ನ್ನು ಹುಡುಕಿ. 

ನಂತರ ಆ ಪುಟದಲ್ಲಿ ಅಧಿಸೂಚನೆಯ ಜೊತೆ ಕೊಟ್ಟಿರುವ ”click here to apply online” ಕ್ಲಿಕ್ಕಿಸಿದರೆ BMRCL Recruitment ಪೇಜ್ ತೆರೆದುಕೊಳ್ಳುತ್ತದೆ. 

ಆ ಸ್ಕ್ರೀನ್ ನಲ್ಲಿ ಮೇಲೆ ಕೊಟ್ಟಿರುವ Application Form ಅನ್ನು ಕ್ಲಿಕ್ ಮಾಡಿ. ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. 

ಅಭ್ಯರ್ಥಿಗಳು ಈ ಲೇಖನದ ಕೆಳಗೆ ಕೊಟ್ಟಿರುವ Application Form ಬಟನ್ ಅನ್ನು ಒತ್ತಿದರೆ ಮೇಲಿನ ಎರಡು ಹಂತಗಳನ್ನು ದಾಟಿ ನೇರವಾಗಿ ಅರ್ಜಿ ನಮೂನೆಗೆ ಹೋಗಬಹುದು.

ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕು. ಮತ್ತು ಸ್ವಯಂ ದೃಢೀಕರಿಸಿದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ Speed Post/ courier ಮುಖಾಂತರ ದಿನಾಂಕ 15-07-2024, ಗಂಟೆ 04:00 ರೊಳಗೆ ಕೆಳಗೆ ಕೊಟ್ಟಿರುವ BMRCL ಕಛೇರಿಯ ವಿಳಾಸವನ್ನು ತಲುಪುವಂತೆ ಕಳುಸಿಸಬೇಕು. 

ಮುಖ್ಯವಾಗಿ ಅರ್ಜಿ ಕಳಿಸುವ envelope ಮೇಲೆ “APPLICATION FOR THE POST OF “STATION CONTROLLER / TRAIN OPERATOR” ಎಂದು ಬರೆದು ಕಳಿಸಬೇಕಾಗುತ್ತದೆ.

Postal Address: 

General Manager (HR),

Bangalore Metro Rail Corporation Limited,

III Floor, BMTC Complex, K.H Road, Shanthinagar,

Bengaluru – 560027

Application Fee for BMRCL Recruitment 2024

ಈ ಹುದ್ದೆಯು ಮಾಜಿ ಮಿಲಿಟರಿ ಸಿಬ್ಬಂದಿಗಾಗಿಯೇ ರಚಿಸಲಾದ ವಿಶೇಷ ನೇಮಕಾತಿ ಆಗಿರುವುದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗುವುದಿಲ್ಲ ಎಂಬುದಾಗಿ BMRCL Recruitment 2024 Notification ನಲ್ಲಿ ತಿಳಿಸಲಾಗಿದೆ.

Remuneration and Allowances 

ಈ ಹುದ್ದೆಗೆ ಆಯ್ಕೆಗೊಂಡ  ಅರ್ಹ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ರೂ. 35,000/- ದಿಂದ ರೂ. 82,660/- ರವರೆಗೆ ನೀಡಲಾಗುವುದು ಮತ್ತು ಇದರೊಂದಿಗೆ ಶೇ. 3 ರಷ್ಟು annual increment ನ್ನು ಸಹಾ ನೀಡಲಾಗುವುದು. ಹಾಗೆಯೇ ಆಯ್ಕೆಗೊಂಡ ಅಭ್ಯರ್ಥಿಗಳಿಗೆ BMRCL O&M Wing ನ ನಿಯಮಗಳಿಗೆ ಅನ್ವಯವಾಗುವಂತೆ ಸ್ವಲ್ಪ ಮಟ್ಟಿನ ಭತ್ಯೆಯನ್ನು ನೀಡಲಾಗುವುದು

Important Links 

BMRCL Recruitment 2024 NotificationDownload Now
BMRCL(Bangalore Namma Metro) Official WebsiteVisit Now
BMRCL Recruitment Career PageVisit Now
BMRCL Recruitment 2024 Application FormVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelFollow Now

Read Also:

FAQ

Q: How long the contract period will be for BMRCL Recruitment for Station Controller or Train Operator?

A: Two  years of Probation period. If they are satisfied with your work, they will extend the period.

Q: What is the full form of BMRCL?

A: Bangalore Metro Rail Corporation Limited

Q: What is the last date for application submission of a Station Controller or Train Operator recruitment?

A: 10th July 2024

Q: Who can apply for Station Controller or Train Operator recruitment?

A: Only Retired Indian Army candidates can apply for Station Controller or Train Operator posts. 

Q: What is the pay scale for Station Controller or Train Operators posts?

A: Rs.35,000 /- to Rs.85,660 /-


Share the Info

Leave a Comment