2027ರ ಜನಗಣತಿ| ಸ್ವಯಂ-ಗಣತಿ (Self-Enumeration) ಸಂಪೂರ್ಣ ಮಾಹಿತಿ| se.census.gov.in: Self census Full Information

Share the Info

How to do Self-census?

Self census Full Information: ಕೇಂದ್ರ ಸರಕಾರ ಈ ಬಾರಿ ಬಹಳ ಕಟ್ಟುನಿಟ್ಟಾಗಿ, ವ್ಯವಸ್ಥಿತವಾಗಿ ಜನಗಣತಿ ಮಾಡಲು ಹೊರಟಿಗೆ.  2026-27 ರ ಜನಗಣತಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ಭರ್ತಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅಧಿಕಾರಿಗಳು ಮನೆಗೆ ದಾಖಲೆಗಾಗಿ ತಡವರಿಸುವ ಬಾಧೆ ತಪ್ಪುತ್ತದೆ. ಸಾರ್ವಜನಿಕರು ಅಧಿಕಾರಿಗಳು ಬರುವ ಮುನ್ನವೇ ತಮ್ಮ ಮಾಹಿತಿಯನ್ನು ಸಂಬಂಧಪಟ್ಟ ಪೋರ್ಟಲ್ ನಲ್ಲಿ ಸ್ವಯಂ ಗಣತಿ ಮಾಡುವ ಮೂಲಕ ಅಧಿಕಾರಿಗಳ ಅರ್ಧ ಕೆಲಸವನ್ನು ಸರಳಗೊಳಿಸಿದಂತಾಗುತ್ತದೆ.  ಈ ಪ್ರಕ್ರಿಯೆಯು ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ನಡೆಯಲಿದೆ.

Self census Full Information

ಮಾಹಿತಿಯನ್ನು ಭರ್ತಿ ಮಾಡುವ ಹಂತಗಳು:

  1. ವೆಬ್‌ಸೈಟ್‌ಗೆ ಭೇಟಿ ನೀಡಿ: 

ಜನಗಣತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ. ನೀವು ಬ್ರೌಸರ್‌ನಲ್ಲಿ se.census.gov.in ಎಂದು ನಮೂದಿಸಿದಾಗ, ಸ್ವಯಂ-ಗಣತಿಯ ಅಧಿಕೃತ ಮುಖಪುಟ ತೆರೆಯುತ್ತದೆ. ಇದು ಸುರಕ್ಷಿತವಾಗಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇಲ್ಲಿ ನೇರವಾಗಿ ದಾಖಲಿಸಬಹುದು. Self census Full Information.

Careerlive Whatsapp Channel
Careerlive Whatsapp Group

ಮೊದಲು ಗೂಗಲ್‌ನಲ್ಲಿ se.census.gov.in ವೆಬ್ಸೈಟ್ ಭೇಟಿ ನೀಡಿ. ಅಥವಾ Census ಅನ್ನು ಕ್ಲಿಕ್ ಮಾಡಿ ಮತ್ತು ನೇರ ಲಿಂಕ್ ಪಡೆಯಿರಿ. 

Self census Full Information
  1. ಲಾಗಿನ್ ವಿವರಗಳು ಹಾಕಿ: 

ನೀವು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ಮೊದಲು ತಿಳಿಸಬೇಕು. ಅದಕ್ಕಾಗಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ನಂತರ ಪರದೆಯ ಮೇಲೆ ಕಾಣುವ ಸಂಕೀರ್ಣ ಅಕ್ಷರಗಳನ್ನು (Captcha) ನಮೂದಿಸಬೇಕು. ಇದು ಯಂತ್ರಗಳ ಅಥವಾ ಸ್ಕ್ಯಾಮ್‌ಗಳ ಪ್ರವೇಶವನ್ನು ತಡೆಯಲು ಇರುವ ಸುರಕ್ಷತಾ ಕ್ರಮವಾಗಿದೆ.

  • ಮೊದಲು ನೀವು ನಿಮ್ಮ ರಾಜ್ಯವನ್ನು (State) ಆಯ್ಕೆ ಮಾಡಿ.
Self census Full Information
  • ಅಲ್ಲಿ ತೋರಿಸುವ ಕ್ಯಾಪ್ಚಾ (Captcha) ಕೋಡ್ ಅನ್ನು ನಿಖರವಾಗಿ ನಮೂದಿಸಿ.
Self census Full Information
  • ನಂತರ Verify & Proceed ಬಟನ್ ಒತ್ತಿ.
Self census Full Information
  1. ಕುಟುಂಬದ ಮುಖ್ಯಸ್ಥರ ವಿವರ ನೀಡಿ: 

ಕುಟುಂಬದ ಪರವಾಗಿ ಮಾಹಿತಿ ನೀಡುವ ವ್ಯಕ್ತಿ ತನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ನೀವು ನೀಡಿದ ಸಂಖ್ಯೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಫೋನ್‌ಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಬರುತ್ತದೆ. ಅದನ್ನು ನಮೂದಿಸಿದಾಗ ಮಾತ್ರ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗುತ್ತದೆ.

  • ಕುಟುಂಬದ ಮುಖ್ಯಸ್ಥರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ.
  • ಭಾಷೆ ಆಯ್ಕೆ ಮಾಡಿ
Self census Full Information
  • ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ವೆರಿಫೈ ಮಾಡಿ.
Self census Full Information
  1. ಸ್ಥಳದ ಮಾಹಿತಿ (Location) ನೀಡಿ:

ನಿಮ್ಮ ವಾಸಸ್ಥಳದ ಸರಿಯಾದ ವಿಳಾಸಕ್ಕಾಗಿ ಜಿಲ್ಲೆ ಮತ್ತು ಪಿನ್‌ಕೋಡ್ ನಮೂದಿಸಬೇಕು. ನೀವು ಸರ್ಚ್ ಬಟನ್ ಒತ್ತಿದಾಗ ಗೂಗಲ್ ಮ್ಯಾಪ್ ತೆರೆಯುತ್ತದೆ. ಅಲ್ಲಿ ನಿಮ್ಮ ಮನೆ ಇರುವ ಜಾಗವನ್ನು ನಿಖರವಾಗಿ ಗುರುತಿಸುವುದು ಮುಖ್ಯ, ಏಕೆಂದರೆ ಇದು ಭೌಗೋಳಿಕ ಗಣತಿಗೆ ಸಹಕಾರಿಯಾಗುತ್ತದೆ.

  • ನಿಮ್ಮ ಜಿಲ್ಲೆ, ಪಿನ್‌ಕೋಡ್ ಮತ್ತು ಊರಿನ ಹೆಸರನ್ನು ಆಯ್ಕೆ ಮಾಡಿ ‘Search‘ ನೀಡಿ.
Self census Full Information
  • ಮ್ಯಾಪ್‌ನಲ್ಲಿ ನಿಮ್ಮ ಸ್ಥಳ ಸರಿಯಾಗಿದೆಯೇ ಎಂದು ಪರಿಶೀಲಿಸಿ Save and move on ಒತ್ತಿ.
Self census Full Information
  1. ಕುಟುಂಬ ಮತ್ತು ಮನೆಯ ವಿವರಗಳು ನೀಡಿ  : 

ಇದು ಅತ್ಯಂತ ಪ್ರಮುಖ ಹಂತ. ಇಲ್ಲಿ ನಿಮ್ಮ ಮನೆಯ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆಗಳಿರುತ್ತವೆ:

  • ಮನೆಯ ವಿಧ: ಗೋಡೆ ಮತ್ತು ಚಾವಣಿ ಯಾವುದರಿಂದ ಮಾಡಲ್ಪಟ್ಟಿದೆ?
  • ಸೌಲಭ್ಯಗಳು: ಕುಡಿಯುವ ನೀರು ಎಲ್ಲಿಂದ ಬರುತ್ತದೆ? ಶೌಚಾಲಯದ ವ್ಯವಸ್ಥೆ ಇದೆಯೇ? ವಿದ್ಯುತ್ ಸಂಪರ್ಕವಿದೆಯೇ?
  • ಆಸ್ತಿಗಳು: ಈ ಮಾಹಿತಿಯು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
  • ಮನೆಯ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ನೀಡಿ
  • ಕುಡಿಯುವ ನೀರಿನ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ
  • ವಿದ್ಯುತ್, ಶೌಚಾಲಯದ ಬಗ್ಗೆ ಮಾಹಿತಿ ನೀಡಿ
  • ಮನೆಯಲ್ಲಿರುವ ಸದಸ್ಯರ ಸಂಖ್ಯೆಯಂತಹ ವಿವರಗಳನ್ನು ಭರ್ತಿ ಮಾಡಿ. 
  • ಕೊನೆಯಲ್ಲಿ ಮನೆಯಲ್ಲಿರುವ ಆಸ್ತಿಗಳ (ಟಿವಿ, ಇಂಟರ್ನೆಟ್, ವಾಹನ ಇತ್ಯಾದಿ) ಮಾಹಿತಿಯನ್ನು ನೀಡಿ.
Self census Full Information
  1. Submit ಮಾಡಿ: ಎಲ್ಲಾ ಮಾಹಿತಿ ಸರಿಯಾಗಿದ್ದರೆ ಕೊನೆಯದಾಗಿ Submit ಬಟನ್ ಒತ್ತಿ.
Self census Full Information

ಮುಖ್ಯವಾದ ಸೂಚನೆ:

  • Submit  ಮಾಡಿದ ನಂತರ ನಿಮಗೆ SE ID (Self-Enumeration ID) ದೊರೆಯುತ್ತದೆ. ಇದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
  • ಏಪ್ರಿಲ್ 16 ರ ನಂತರ ನಿಮ್ಮ ಮನೆಗೆ ಬರುವ ಜನಗಣತಿ ಅಧಿಕಾರಿಗಳಿಗೆ (Enumerators) ಈ ಐಡಿಯನ್ನು ನೀಡಿದರೆ ನಿಮ್ಮ ಗಣತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
  • ಒಂದು ವೇಳೆ ನೀವು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಸಾಧ್ಯವಾಗದಿದ್ದರೆ, ಗಣತಿ ಅಧಿಕಾರಿಗಳು ಮನೆಗೆ ಬಂದಾಗ ಅವರಿಗೆ ನೇರವಾಗಿ ಮಾಹಿತಿ ನೀಡಬಹುದು.
  • ಅದಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡಿರಿ.
Self census Full Information

ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡಿದ ತಕ್ಷಣ ಕೆಲಸ ಮುಗಿಯುವುದಿಲ್ಲ. ಏಪ್ರಿಲ್ 16ರ ನಂತರ ಗಣತಿ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ಅವರಿಗೆ ನಿಮ್ಮ SE ID ತೋರಿಸಿದರೆ ಸಾಕು, ಅವರು ನಿಮ್ಮ ಮಾಹಿತಿಯನ್ನು ತಮ್ಮ ಸಾಧನದಲ್ಲಿ (Tablet/Mobile) ಅಪ್‌ಡೇಟ್ ಮಾಡಿಕೊಳ್ಳುತ್ತಾರೆ. ಇದರಿಂದ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಅವಶ್ಯಕತೆ ಇರುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆಳಗೆ ಕಾಮೆಂಟ್ ಮಾಡಿ. ಮಾಹಿತಿ ಇಷ್ಟ ಆದಲ್ಲಿ ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಿ. ಅದೇ ರೀತಿ ಈ ಮಾಹಿತಿಯನ್ನು ಆದಷ್ಟು ಮಂದಿಗೆ ತಲುಪುವ ಹಾಗೆ ಮಾಡಿ. ಎಲ್ಲರಿಗೂ ಸರಿಯಾದ ಮಾಹಿತಿ ಸಿಗಲಿ. ಸರಕಾರದ ಜೊತೆ ನಾವು ಕೈಜೋಡಿಸೋಣ.

ಸ್ವ ಗಣತಿ ಮಾಡಿಕೊಳ್ಳಲು ಈ ಲಿಂಕ್ ಗೆ ಕ್ಲಿಕ್ ಕೊಡಿ. – Click here

FAQ

Q: ಸ್ವಯಂ-ಗಣತಿ (Self-Enumeration) ಎಂದರೇನು?

A: ಜನಗಣತಿ ಅಧಿಕಾರಿಗಳು ನಿಮ್ಮ ಮನೆಗೆ ಬರುವ ಮೊದಲೇ, ನೀವೇ ಸ್ವತಃ ಆನ್‌ಲೈನ್ ಪೋರ್ಟಲ್ ಮೂಲಕ ನಿಮ್ಮ ಕುಟುಂಬದ ವಿವರಗಳನ್ನು ಸಲ್ಲಿಸುವ ಪ್ರಕ್ರಿಯೆಯಿದು.

Q: ಯಾವ ವೆಬ್‌ಸೈಟ್‌ನಲ್ಲಿ ಮಾಹಿತಿ ಭರ್ತಿ ಮಾಡಬೇಕು?

A: ನೀವು ಅಧಿಕೃತ ಪೋರ್ಟಲ್ ಆದ se.census.gov.in ಗೆ ಭೇಟಿ ನೀಡಬೇಕು

Q: ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

A: ಸ್ವಯಂ-ಗಣತಿ ಪ್ರಕ್ರಿಯೆಯು ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಮಾತ್ರ ಲಭ್ಯವಿರುತ್ತದೆ.

Q: ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡುವುದು ಕಡ್ಡಾಯವೇ?

A: ಇಲ್ಲ, ಇದು ಕಡ್ಡಾಯವಲ್ಲ. ನೀವು ಆನ್‌ಲೈನ್‌ನಲ್ಲಿ ಭರ್ತಿ ಮಾಡದಿದ್ದರೆ, ಏಪ್ರಿಲ್ 16 ರ ನಂತರ ಜನಗಣತಿ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಆದರೆ ಆನ್‌ಲೈನ್‌ನಲ್ಲಿ ಭರ್ತಿ ಮಾಡುವುದರಿಂದ ನಿಮ್ಮ ಮತ್ತು ಅಧಿಕಾರಿಗಳ ಸಮಯ ಉಳಿತಾಯವಾಗುತ್ತದೆ.

Q: SE ID ಎಂದರೇನು ಮತ್ತು ಅದು ಏಕೆ ಮುಖ್ಯ?

A: ನೀವು ಆನ್‌ಲೈನ್‌ನಲ್ಲಿ ಫಾರ್ಮ್ ಸಬ್ಮಿಟ್ ಮಾಡಿದ ನಂತರ ಸಿಗುವ ಸಂಖ್ಯೆಯೇ ‘Self-Enumeration ID’ (SE ID). ಜನಗಣತಿ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಅವರಿಗೆ ಈ ಐಡಿಯನ್ನು ತೋರಿಸಬೇಕಾಗುತ್ತದೆ. ಇದರಿಂದ ಅವರು ನಿಮ್ಮ ಮಾಹಿತಿಯನ್ನು ಸುಲಭವಾಗಿ ದೃಢೀಕರಿಸಬಹುದು.

Q: ಮಾಹಿತಿ ಭರ್ತಿ ಮಾಡಲು ಏನೆಲ್ಲಾ ದಾಖಲೆಗಳು ಬೇಕು?

A: ಯಾವುದೇ ಭೌತಿಕ ದಾಖಲೆಗಳ ಅಪ್‌ಲೋಡ್ ಅಗತ್ಯವಿಲ್ಲ. ಆದರೆ ಕುಟುಂಬದ ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಮನೆಯ ಸೌಲಭ್ಯಗಳ ವಿವರ ಮತ್ತು ಆಧಾರ್ ಸಂಖ್ಯೆ (ಇದ್ದರೆ) ನಿಮ್ಮ ಬಳಿ ಇರುವುದು ಉತ್ತಮ.

Q: ನಾನು ಒಮ್ಮೆ ಸಬ್ಮಿಟ್ ಮಾಡಿದ ಮಾಹಿತಿಯನ್ನು ತಿದ್ದುಪಡಿ ಮಾಡಬಹುದೇ?

A: ಫೈನಲ್ ಸಬ್ಮಿಟ್ ಮಾಡುವ ಮೊದಲು ನೀವು ಮಾಹಿತಿಯನ್ನು ಪರಿಶೀಲಿಸಬಹುದು. ಒಮ್ಮೆ ಸಬ್ಮಿಟ್ ಮಾಡಿ SE ID ಬಂದ ನಂತರ, ಏನಾದರೂ ಬದಲಾವಣೆಗಳಿದ್ದರೆ ಗಣತಿ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಅವರಿಗೆ ತಿಳಿಸಿ ಸರಿಪಡಿಸಿಕೊಳ್ಳಬಹುದು.

Q: ನನ್ನ ಮಾಹಿತಿ ಸುರಕ್ಷಿತವೇ?

A: ಹೌದು, ಜನಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಇದನ್ನು ಕೇವಲ ದೇಶದ ಯೋಜನೆ ಹಾಗೂ ಅಭಿವೃದ್ಧಿಯ ಅಂಕಿಅಂಶಗಳ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ.

Q: ನಮ್ಮ ಮನೆಯಲ್ಲಿ ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಇಲ್ಲದಿದ್ದರೆ ಏನು ಮಾಡುವುದು?

A: ಯಾವುದೇ ಆತಂಕ ಬೇಡ. ಅಂತಹ ಸಂದರ್ಭದಲ್ಲಿ ಗಣತಿ ಅಧಿಕಾರಿಗಳು ಏಪ್ರಿಲ್ 16 ರಿಂದ ನಿಮ್ಮ ಮನೆಗೆ ಭೇಟಿ ನೀಡಿ, ಅವರಲ್ಲಿರುವ ಮೊಬೈಲ್ ಆಪ್ ಮೂಲಕ ನಿಮ್ಮ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಾರೆ.


Share the Info

Leave a Comment