BSF Recruitment 2024 SI Selection Process and Syllabus, Marks, Medical Test

Share the Info

Table of Contents

BSF Recruitment 2024 Inspector(Librarian) ಹುದ್ದೆಗೆ ಆಯ್ಕೆ ವಿಧಾನ

BSF Recruitment 2024 SI Selection Process: BSF ನೇಮಕಾತಿ ಸುತ್ತೋಲೆಯಲ್ಲಿ ತಿಳಿಸಿರುವಂತೆ Inspector(Librarian) ಹುದ್ದೆಗೆ 3  ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. BSF Recruitment 2024 ಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ತಮ್ಮ ದಾಖಲೆಗಳೆಲ್ಲ ಸಿದ್ಧಗೊಳಿಸುವುದರ ಜೊತೆಗೆ ಇಲಾಖೆ ನಡೆಸುವ ಆಯ್ಕೆ ಪ್ರಕ್ರಿಯೆಗೂ ತಯಾರಿ ಮಾಡಿಕೊಂಡರೆ ದೇಶದ ಗೌರವಯುತವಾದ ಭಾರತೀಯ ಸೇನೆಗೆ ಸೇರುವುದರಿಂದ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. 


ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ

Careerlive Telegram Channel
Careerlive Whatsapp Channel
Careerlive Whatsapp Group

BSF Recruitment 2024 SI Selection Process will be in Three Phases.

 

  1. ಮೊದಲನೆಯ ಹಂತದ ಆಯ್ಕೆ ಪರೀಕ್ಷೆ : ಲಿಖಿತ ಪರೀಕ್ಷೆ(Written Test)

  2. ಎರಡನೇ ಹಂತದ ಆಯ್ಕೆ ಪರೀಕ್ಷೆ : ದೇಹದಾರ್ಢ್ಯತೆ ಪರೀಕ್ಷೆ(Physical Standard Test)

  3. ಮೂರನೇ ಹಂತದ ಪರೀಕ್ಷೆ : ವೈದ್ಯಕೀಯ ಪರೀಕ್ಷೆ (Medical Examination)

BSF Recruitment 2024 SI Selection Process

ಮೊದಲನೆಯ ಹಂತದ ಆಯ್ಕೆ ಪರೀಕ್ಷೆ : ಲಿಖಿತ ಪರೀಕ್ಷೆ(Written Test)

BSF Recruitment 2024 ನ ಅರ್ಹ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲನೆಯ ಹಂತದಲ್ಲಿ Written Test ನಡೆಯಿತ್ತದೆ. ಇಲಾಖೆ ತಿಳಿಸಿರುವ ಪ್ರಕಾರ ಯೋಗ್ಯ ಅಂಕಗಳ ಆಧಾರದಲ್ಲಿ ಮುಂದಿನ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. 


ಒಟ್ಟು 150 ಅಂಕಗಳಿಗೆ ಬಹು ಆಯ್ಕೆಯ Objective Type ನ ಪ್ರಶ್ನೆ ಪತ್ರಿಕೆ ಇರಲಿದೆ. ಒಟ್ಟು 150 ಪ್ರಶ್ನೆ ಗಳು ಇರಲಿದ್ದು ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ಇರಲಿದೆ.

 

ಲಿಖಿತ ಪರೀಕ್ಷೆಗೆ ಪಠ್ಯಕ್ರಮ(Syllabus)

BSF Recruitment 2024 SI Selection Process: Border Security Force ನಲ್ಲಿ ಖಾಲಿ ಇರುವ  Inspector(Librarian/Combatised) ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲನೆಯ ಹಂತ ಲಿಖಿತ ಪರೀಕ್ಷೆಯಲ್ಲಿ ಒಟ್ಟು ಎರಡು ಹಂತದ ಅಂದರೆ Part A ಮತ್ತು Part B ಹಂತದಲ್ಲಿ  ಪರೀಕ್ಷೆ ನಡೆಯಲಿದೆ.

Part A

ಲಿಖಿತ ಪರೀಕ್ಷೆಯಲ್ಲಿ ಮೊದಲನೇ ಹಂತದಲ್ಲಿ ಭಾಗ 1 ಪರೀಕ್ಷೆಯಲ್ಲಿ ಅಭ್ಯರ್ಥಿಗಳು General Knowledge and Basic of Computer ನ ಕುರಿತ ಪರೀಕ್ಷೆಯನ್ನು ಎದುರಿಸಬೇಕು. ಈ ಪರೀಕ್ಷೆ ಒಟ್ಟು 2.30 ಗಂಟೆ ಇರಲಿದ್ದು, ಒಟ್ಟು 70 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

 

1. General Awareness (ಸಾಮಾನ್ಯ ಅರಿವು)

BSF Recruitment 2024 Notification ಪ್ರಕಾರ ಈ ಪತ್ರಿಕೆಯಲ್ಲಿ ಪ್ರಸ್ತುತ ವಿದ್ಯಮಾನಗಳು, ವೈಜ್ಞಾನಿಕ ಸಂಶೋಧನೆ, ಅರ್ಥಶಾಸ್ತ್ರ, ಭಾರತೀಯ ಭೂಗೋಳ, ರಾಜಕೀಯ, ಸಂವಿಧಾನ, ಭಾರತೀಯ ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯಗಳ ಬಗ್ಗೆ ಪ್ರಶ್ನೆಗಳು ಇರಲಿವೆ.  ಒಟ್ಟು ೧೫ ಅಂಕಗಳ ೧೫ ಪ್ರಶ್ನೆಗಳು ಇರಲಿದೆ. 

 

2. English Language (ಇಂಗ್ಲಿಷ್ ಭಾಷೆ)

BSF ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಇಂಗ್ಲಿಷ್ ಭಾಷಾ ಪತ್ರಿಕೆಯಲ್ಲಿ ಆಂಗ್ಲ ಭಾಷೆಯನ್ನು ಸರಿಯಾದ ರೀತಿಯಲ್ಲಿ ಬಳಸುವ ಬಗ್ಗೆ ಮತ್ತು ಭಾಷೆಯ ಬಗ್ಗೆ ಜ್ಞಾನ, ಪದಗಳ ಪೋಣಿಕೆಯಲ್ಲಿ ದೋಷವನ್ನು ಗುರುತಿಸುವುದರ ಬಗ್ಗೆ ಪ್ರಶ್ನೆಗಳು ಇರಲಿದೆ. ಅಲ್ಲದೆ ಕ್ರಿಯಾಪದಗಳು, ಪೂರ್ವಭಾವಿ ಸ್ಥಾನಗಳನ್ನು ಬಳಸಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡುವುದು, ಶಬ್ದಕೋಶ, ವ್ಯಾಕರಣಗಳು,  ವಾಕ್ಯವನ್ನು ಹೇಗೆ ಪೂರ್ಣಗೊಳಿಸಬೇಕೆಂಬ ಬಗ್ಗೆ,  ಸಮಾನಾರ್ಥಕಗಳು, ನುಡಿಗಟ್ಟುಗಳು ಮತ್ತು ಭಾಷಾವೈಶಿಷ್ಟ್ಯಗಳ ಬಗ್ಗೆ ಈ ಪತ್ರಿಕೆಯಲ್ಲಿ ಒಟ್ಟು 20 ಪ್ರಶ್ನೆಗಳು ಇರಲಿವೆ. ಮತ್ತು ಒಟ್ಟು 20 ಅಂಕಗಳ ಪ್ರಶ್ನೆಗಳಾಗಿರುತ್ತವೆ.

 

3. General Intelligence (ಸಾಮಾನ್ಯ ಬುದ್ಧಿವಂತಿಕೆ)

ಈ ಪತ್ರಿಕೆಯಲ್ಲಿ ಅಭ್ಯರ್ಥಿಯ ಸಾಮಾನ್ಯ ಬುದ್ಧಿಮತ್ತೆಯ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಬುದ್ಧಿಮತ್ತೆಯ ಕುರಿತಾದ ಒಟ್ಟು 15 ಪ್ರಶ್ನೆಗಳಿದ್ದು,  ಒಟ್ಟು 15 ಅಂಕಗಳಿರಲಿದೆ. ಈ ಪತ್ರಿಕೆಯಲ್ಲಿ ವಿಶೇಷವಾಗಿ ಹೋಲಿಕೆಗಳು, ಅಂಕಗಣಿತದ ತಾರ್ಕಿಕತೆ, ಮೌಖಿಕ, ವ್ಯತ್ಯಾಸಗಳು, ಬಾಹ್ಯಾಕಾಶ ದೃಶ್ಯೀಕರಣ, analogies, problem solving, ಪರಿಕಲ್ಪನೆಗಳು, ಮತ್ತು ಅಂಕಿ ವರ್ಗೀಕರಣ, ಅಂಕಗಣಿತದ ಸಂಖ್ಯೆ ಸರಣಿ, ಕೋಡಿಂಗ್ ಮತ್ತು ಡಿಕೋಡಿಂಗ್ ಮುಂತಾದವುಗಳ ಬಗ್ಗೆ ಒಟ್ಟು 15 ಪ್ರಶ್ನೆಗಳಿರಲಿದೆ.

 

4. Basics of Computer

ಈ ಪತ್ರಿಯಲ್ಲಿ ಒಟ್ಟು 20 ಅಂಕಗಳ ಒಟ್ಟು 20 ಪ್ರಶ್ನೆಗಳು ಇರಲಿದೆ. ಕಂಪ್ಯೂಟರ್ ಬಗ್ಗೆ ಸಾಮಾನ್ಯ ಜ್ಞಾನದ ಕುರಿತು ಮತ್ತು ಅಂತರ್ಜಾಲದಲ್ಲಿ ಗ್ರಂಥಾಲಯ ಬಳಕೆ ಬಗ್ಗೆ ಈ ಪತ್ರಿಕೆಯಲ್ಲಿ ಪ್ರಶ್ನೆಗಳು ಇರಲಿವೆ. 

 

ಪ್ರಶ್ನೆಪತ್ರಿಕೆಯ ಪ್ರಮುಖ ಅಂಶಗಳು

 

  • ಕಂಪ್ಯೂಟರ್-ಗುಣಲಕ್ಷಣಗಳ ಪರಿಚಯ(Introduction to computer-Characteristics).

  • ಓಪನ್ ಸೋರ್ಸ್ ಸಾಫ್ಟ್‌ವೇರ್ (Open-source software).

  • ಲೈಬ್ರರಿ ಆಟೊಮೇಷನ್‌ನ ಪಾತ್ರ (Role of library automation)

  • ಅಂತರ್ಜಾಲ ಲೈಬ್ರರಿಯ ಬಳಕೆ (Important Use of the Internet libraries)

  • ಅಂತರ್ಜಾಲದಲ್ಲಿ ಸಿಗುವ ಎಲೆಕ್ಟ್ರಾನಿಕ್ ಸಂಪನ್ಮೂಲಗಳ ಬಗ್ಗೆ ಅಂದರೆ e-Books, e-Journals, and databases, etc.

  • ವಿವಿಧ ಬಗೆಯ  ಕಂಪ್ಯೂಟರ್ ಬಗ್ಗೆ  ಮತ್ತು ಅದರ ಬಳಕೆಯ ಬಗ್ಗೆ.

  • ಹಾರ್ಡ್‌ವೇರ್, ಸಾಫ್ಟ್‌ವೇರ್, ಇನ್‌ಪುಟ್ ಮತ್ತು ಔಟ್‌ಪುಟ್ ಸಾಧನಗಳ ಬಗ್ಗೆ ಮತ್ತು ಅವುಗಳು ಬೆಳೆದ ಬಂದ ಹಾದಿ. 

  • ಅಗತ್ಯ ಸಾಫ್ಟ್ವೇರ್ ಬಗ್ಗೆ ಮಾಹಿತಿ ಮತ್ತು ಅದರ ಬಳಕೆಯ ಬಗ್ಗೆ ವಿವರ 

  • ಲೈಬ್ರರಿ ಸಾಫ್ಟ್‌ವೇರ್‌ಗಳು (Library softwares)

Part B

BSF Recruitment 2024 Notification ಪ್ರಕಾರ BSF Recruitment 2024 SI Selection Process na ಲಿಖಿತ ಪರೀಕ್ಷೆಯ ಮತ್ತೊಂದು ಹಂತ Part B ಯಲ್ಲಿ ಲೈಬ್ರರಿ ಮಾಹಿತಿ ಮತ್ತು ವಿಜ್ಞಾನ ದ ಕುರಿತಾದ ಒಟ್ಟು 4 ಪತ್ರಿಕೆಯಲ್ಲಿ 80 ಅಂಕಗಳ ಒಟ್ಟು 80 ಪ್ರಶ್ನೆಗಳು ಇರಲಿದೆ.  ಆ 4 ಪತ್ರಿಕೆಗಳು ಬೇರೆ ಬೇರೆ ಅಂಕಗಳನ್ನ ಹಂಚಲಾಗಿದೆ.

 

1. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪ್ರತಿಷ್ಠಾಪನೆ(Foundation for Library and Information Science)

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪ್ರತಿಷ್ಠಾಪನೆ ಬಗ್ಗೆ ಕುರಿತಾದ ಪ್ರಶ್ನೆಗಳು ಈ ಪತ್ರಿಕೆಯಲ್ಲಿ ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಈ ಕೆಳಗಿನ ವಿಷಗಳ ಬಗ್ಗೆ ಪ್ರಶ್ನೆಗಳಿದ್ದು ಒಟ್ಟು 10 ಪ್ರಶ್ನೆಗಳು ಇರಲಿದೆ ಮತ್ತು ಒಟ್ಟು 10 ಅಂಕಗಳನ್ನು ಪಡೆಯಬೇಕಾಗುತ್ತದೆ. 

 

ಪ್ರಶ್ನೆಪತ್ರಿಕೆಯ ಪ್ರಮುಖ ಅಂಶಗಳು

 

  • ಗ್ರಂಥಾಲಯದ ಪ್ರಮುಖ ಪರಿಕಲ್ಪನೆ.(Important Concept of library.)

  • ಪ್ರಮುಖ ಮಾಹಿತಿ ಮತ್ತು ಸಮಾಜ.

  • ಗ್ರಂಥಾಲಯ ಶಾಸನದ ಪ್ರಮುಖ ಅಂಶಗಳು.(Important points of Library legislation.)

  • ಭಾರತದಲ್ಲಿ ಇರುವ ಗ್ರಂಥಾಲಯ ಕಾಯಿದೆಗಳ ಬಗ್ಗೆ. 

  • ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಕಾನೂನು

  • ILA, IFLA and UNESCO and RRRLF ನ ಪಾತ್ರ ಮತ್ತು ಚಟುವಟಿಕೆಗಳು.

  • ಗ್ರಂಥಾಲಯ ಮೂಲಗಳ ಹಂಚಿಕೆ(Library resource sharing).

  • ಸಾಮಾಜಿಕ ಶೈಕ್ಷಣಿಕ ವ್ಯವಸ್ಥೆಯಾಗಿ ಗ್ರಂಥಾಲಯ(Library as a social institution)

  • ವಿವಿಧ ಬಗೆಯ ಗ್ರಂಥಾಲಯಗಳು(Types of libraries).

  • ಗ್ರಂಥಾಲಯಗಳ ಬಗ್ಗೆ ಮಾಹಿತಿ ಸಾಕ್ಷರತೆಯ ಪರಿಕಲ್ಪನೆ.

  • ರಾಷ್ಟ್ರೀಯ ಗ್ರಂಥಾಲಯಗಳ ಬಗ್ಗೆ 

  • ಗ್ರಂಥಾಲಯ ವಿಜ್ಞಾನದ ಪ್ರಮುಖ ಐದು ನಿಯಮಗಳು ಮತ್ತು ಅವುಗಳ ಪರಿಣಾಮಗಳು.

  • ಭಾರತದಲ್ಲಿ ಗ್ರಂಥಾಲಯ ಚಳುವಳಿ.

 
 
2 .ಲೈಬ್ರರಿ ವರ್ಗೀಕರಣ ಮತ್ತು ಕ್ಯಾಟಲಾಗ್ (Library classification and catalogs)

ಪತ್ರಿಕೆಯಲ್ಲಿ ಒಟ್ಟು 30 ಅಂಕಗಳ ಪ್ರಶ್ನೆಗಳು ಇರಲಿವೆ. ಗ್ರಂಥಾಲಯದ ವರ್ಗೀಕರಣ ಮತ್ತು ಕ್ಯಾಟಲಾಗಿಂಗ್ ನಲ್ಲಿ ಬಳಸಿರುವ ವಿವಿಧ ವಿಷಯಗಳ ಬಗ್ಗೆ ಸಾಧನಗಳ ಬಗ್ಗೆ ಒಟ್ಟು 30 ಪ್ರಶ್ನೆಗಳು ಇರಲಿವೆ. 

 

ಪ್ರಶ್ನೆಪತ್ರಿಕೆಯ ಪ್ರಮುಖ ಅಂಶಗಳು

 

  • ಪ್ರಾಯೋಗಿಕ ವರ್ಗೀಕರಣದ ಹಂತಗಳಲ್ಲಿ C.C ಮತ್ತು D.D.C ಯಲ್ಲಿ ಬಳಸಲಾದ ಪ್ರಮುಖ ಸಾಧನಗಳು. 

  • ಲೈಬ್ರರಿ ಕ್ಯಾಟಲಾಗ್ ನ ವ್ಯಾಖ್ಯಾನ, ಅಗತ್ಯ, ಉದ್ದೇಶ ಮತ್ತು ಕಾರ್ಯ.

  • ವರ್ಗೀಕೃತ ಕ್ಯಾಟಲಾಗ್ ಕೋಡ್ ಮತ್ತು ಆಂಗ್ಲೋ ಅಮೇರಿಕನ್ ಕ್ಯಾಟಲಾಗ್ ನಿಯಮಗಳ ಇತಿಹಾಸ.

  • ನಮೂದುಗಳ ಪ್ರಕಾರ(Types of Entries): ವರ್ಗೀಕೃತ ಕ್ಯಾಟಲಾಗ್ ಕೋಡ್‌ನ ಮುಖ್ಯ ನಮೂದು ಮತ್ತು ಸೇರಿಸಲಾದ ನಮೂದುಗಳು.

  • ಲೈಬ್ರರಿ ವರ್ಗೀಕರಣ ಮತ್ತು ಕ್ಯಾಟಲಾಗ್ ನ ಅಗತ್ಯ, ಉದ್ದೇಶ ಮತ್ತು ಕಾರ್ಯ

  • ಸೂಚನೆ: ವಿಧಗಳು ಮತ್ತು ಗುಣಗಳು

  • ಸಹಾಯಕ ಅನುಕ್ರಮದ ಪ್ರಮುಖ ತತ್ವಗಳು.

  • ಸಾಮಾನ್ಯ ಪ್ರತ್ಯೇಕತೆಗಳು / ಪ್ರಮಾಣಿತ ಉಪವಿಭಾಗಗಳ ಸಾಮಾನ್ಯ ಅಂಶಗಳು.

 
 
3 . ಗ್ರಂಥಾಲಯ ಸಂಸ್ಥೆ ಮತ್ತು ನಿರ್ವಹಣೆ(Library organization and management)

ಗ್ರಂಥಾಲಯದ ಬಗ್ಗೆ ಇರುವ ನಿಯಮಗಳು, ಅಂಕಿ ಅಂಶಗಳ ಮತ್ತು ಇತರ ವಿಷಯಗಳ ಬಗ್ಗೆ ಗ್ರಂಥಾಲಯ ಸಂಸ್ಥೆ ಮತ್ತು ನಿರ್ವಹಣೆ ಪತ್ರಿಕೆಯಲ್ಲಿ ಒಟ್ಟು 30 ಅಂಕಗಳ 30 ಪ್ರಶ್ನೆಗಳಿರಲಿವೆ. 

 

ಪ್ರಶ್ನೆಪತ್ರಿಕೆಯ ಪ್ರಮುಖ ಅಂಶಗಳು

 

  • ಆವರ್ತಕ ವಿಭಾಗದಲ್ಲಿ ಪ್ರಮುಖ ನಿಯಮಗಳು

  • ಪರಿಚಲನೆ ವಿಭಾಗದಲ್ಲಿ ಪ್ರಮುಖ ನಿಯಮಗಳು: ನೆಟ್‌ವರ್ಕ್ ಮತ್ತು ಬ್ರೌನ್

  • ಗ್ರಂಥಾಲಯದ ನಿರ್ವಹಣೆ: ಪರಿಚಲನೆ, ನಿರ್ವಹಣೆ, ಶೆಲ್ವಿಂಗ್, ಸ್ಟಾಕ್ ಪರಿಶೀಲನೆ, ಬೈಂಡಿಂಗ್ ಮತ್ತು ಸಂರಕ್ಷಣೆ, ಕಳೆ ಕಿತ್ತಲು, ಇತ್ಯಾದಿ.

  • ಪ್ರಮುಖ ಕಾರ್ಯವಿಧಾನ ಮತ್ತು ಸೇರ್ಪಡೆ.

  • ಪ್ರಮುಖ ಗ್ರಂಥಾಲಯ ನಿಯಮಗಳು. ಪ್ರಮುಖ ಲೈಬ್ರರಿ ಅಂಕಿಅಂಶಗಳು.

  • ಬಜೆಟ್‌ನ ಪ್ರಮುಖ ವಿಷಯಗಳು.

  • ತಾಂತ್ರಿಕ ಸಂಸ್ಕರಣಾ ವಿಭಾಗ (ಪುಸ್ತಕಗಳ ವರ್ಗೀಕರಣ ಮತ್ತು ಕ್ಯಾಟಲಾಗ್ ಮಾಡುವುದು).

  • ಸಾಮಾನ್ಯ ಮತ್ತು ವೈಜ್ಞಾನಿಕ ತತ್ವಗಳ ನಿರ್ವಹಣೆ ಮತ್ತು ಗ್ರಂಥಾಲಯ ಆಡಳಿತಕ್ಕೆ ಅವುಗಳ ಪರಿಣಾಮ.

  • ಆಡಳಿತದ ಕಾರ್ಯವೈಖರಿ .

  • ಗ್ರಂಥಾಲಯದ ಪ್ರಮುಖ ವಿಭಾಗಗಳು: ಸ್ವಾಧೀನ ವಿಭಾಗ – ಪುಸ್ತಕ ಆಯ್ಕೆ.

  • ದಾಖಲೆಗಳ ಪ್ರಕಾರ ಮತ್ತು ಆಯ್ಕೆಯ ತತ್ವಗಳು, ಬಳಕೆಗಾಗಿ ದಾಖಲೆಗಳ ತಯಾರಿಕೆ.

 
 
4. ಉಲ್ಲೇಖ ಸೇವೆ ಮತ್ತು ಮಾಹಿತಿ ಮೂಲಗಳು(Reference service and information sources)

BSF Recruitment 2024 SI Selection Process ನ ಈ ಪತ್ರಿಕೆಯಲ್ಲಿ ಒಟ್ಟು 10 ಪ್ರಶ್ನೆಗಳು ಒಟ್ಟು 10 ಅಂಕಗಳಿಗೆ ಇರಲಿದ್ದು, ಈ ಕೆಳಗಿನ ವಿಷಗಳು ಒಳಗೊಂಡಿರುತ್ತದೆ. 

 

ಪ್ರಶ್ನೆಪತ್ರಿಕೆಯ ಪ್ರಮುಖ ಅಂಶಗಳು

 

  • ಉಲ್ಲೇಖ ಮತ್ತು ಮಾಹಿತಿ ಸೇವೆಯ ಅಗತ್ಯತೆ ಮತ್ತು ಮುಖ್ಯ ಉದ್ದೇಶ

  • ಉಲ್ಲೇಖ ಮತ್ತು ಮಾಹಿತಿಯ ಸಿದ್ಧ ಉಲ್ಲೇಖ ಸೇವೆ

  • ದೀರ್ಘ-ಶ್ರೇಣಿಯ ಉಲ್ಲೇಖ ಸೇವೆ

  • ಉಲ್ಲೇಖ ಗ್ರಂಥಪಾಲಕರ ಗುಣಗಳು.

  • CAS ಮತ್ತು SDI, ಮಾಹಿತಿ ಮೂಲಗಳು: ಅಗತ್ಯ ಮತ್ತು ಪ್ರಕಾರಗಳು: ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ.

  • ಇನಿಟೇಷನ್ 

  • ಶಾಲೆ ಮತ್ತು ಸಾರ್ವಜನಿಕ ಗ್ರಂಥಾಲಯದಲ್ಲಿ ಉಲ್ಲೇಖ ಸೇವೆ.

  • ಉಲ್ಲೇಖ ವಿಭಾಗದ ಸಂಘಟನೆ.

 
 

Important Notice:

BSF Recruitment 2024 SI Selection Process: ಈ ಪ್ರಥಮ ಹಂತದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಟ್ಟು ಶೇಕಡಾ 45ರಷ್ಟು ಅಂಕಗಳನ್ನ ಪಡೆಯಬೇಕು. ಉತೀರ್ಣರಾದ ಅಭ್ಯರ್ಥಿಗಳು ಮುಂದಿನ ಹಂತದ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆಯ ಆರು ಪಟ್ಟು ಅಭ್ಯರ್ಥಿಗಳು ಮುಂದಿನ ಹಂತದ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಈ ಎಲ್ಲಾ ಲಿಖಿತ ಪರೀಕ್ಷೆಯು CBT ಅಥವಾ OMR ಮಾದರಿ ಪತ್ರಿಕೆಯಲ್ಲಿ ನಡೆಯುತ್ತದೆ. ಹಾಗಾಗಿ ಪತ್ರಿಕೆಯಲ್ಲಿ ಉತ್ತರಿಸುವಾಗ ಸರಿಯಾಗಿ ಆಲೋಚಿಸಿ ಉತ್ತರಿಸಬೇಕಾಗುತ್ತದೆ. ಪತ್ರಿಕೆ ರಿಜೆಕ್ಟ್ ಆದಲ್ಲಿ ಅಂತಹ ಅಭ್ಯರ್ಥಿಗೆ ಮರು ಪರೀಕ್ಷೆ ಇರುವುದಿಲ್ಲ. ಇದು ಪರಿಕ್ಷೆಯ ನಿಯಮವಾಗಿರುತ್ತದೆ.

ಎರಡನೇ ಹಂತದ ಆಯ್ಕೆ ಪರೀಕ್ಷೆ : ದೇಹದಾರ್ಢ್ಯತೆ ಪರೀಕ್ಷೆ(Physical Standard Test)

ಮೊದಲನೆಯ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಎರಡನೇ ಹಂತದ ಆಯ್ಕೆ ವಿಧಾನಕ್ಕೆ ಪ್ರವೇಶ ಸಿಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ರಾಂಕ್ ಗಳಿಸಿದ್ದರು ಸಹ ಎರಡನೇ ಹಂತದಲ್ಲಿ ಯಾವುದೇ ವಿಭಾಗದಲ್ಲಿ ಅನುತ್ತೀರ್ಣರಾದರೆ ಅಂಥಹ ಅಭ್ಯರ್ಥಿಗೆ ಮುಂದಿನ ಸುತ್ತಿಗೆ ಆಯ್ಕೆಯಾಗಲು ಅವಕಾಶ ಇರುವುದಿಲ್ಲ. ಹಾಗಾಗಿ ಪ್ರತಿಯೊಂದು ಹಂತದಲ್ಲೂ ಉತ್ತಮ ಪ್ರರ್ದರ್ಶನ ನೀಡಬೇಕಾಗುತ್ತದೆ. 

 

ಈ ಹಂತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮುಖ್ಯವಾಗಿ ಈ ಕೆಳಗಿನ ಪರೀಕ್ಷೆಗಳು ನಡೆಯುತ್ತದೆ.

 

1. ದೇಹದಾರ್ಢ್ಯತೆ ಪರೀಕ್ಷೆ:

ಮೊದಲನೆಯ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎರಡನೇ ಹಂತದ ಪರೀಕ್ಷೆಯ ಭಾಗವಾಗಿ ಹಲವು ದೇಹದಾರ್ಢ್ಯತೆ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ BSF ನ ಸ್ಟ್ಯಾಂಡರ್ಡ್ ನಿಯಮದ ಪ್ರಕಾರ ಹಲವು ಆಟೋಟ ಸ್ಪರ್ಧೆ ಅಂದರೆ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಗುಡೆಸೆತ, ಈಟಿ ಎಸೆತ, ಮತ್ತಿತರ ಸ್ಪರ್ಧೆ ನಡೆಯಲಿದೆ. 

 

2. ದಾಖಲೆಗಳ ಪರೀಶೀಲನೆ

ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮುಂದಿನ ಡಾಕ್ಯುಮೆಂಟೇಶನ್ ಅಂದರೆ ದಾಖಲೆಗಳ ಪರಿಶೀಲನೆಯ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಹಂತದಲ್ಲಿ ಅಭ್ಯರ್ಥಿಯ ಎಲ್ಲಾ ದಾಖಲೆಗಳನ್ನು ಪರೀಶೀಲನೆ ಮಾಡಲಾಗುತ್ತದೆ. ಅಭ್ಯರ್ಥಿಯು ಸಲ್ಲಿಸಿದ ದಾಖಲೆಗಳು ಸರಿಯಾಗಿದ್ದಲ್ಲಿ ನಂತರ ಕೊನೆಯ ಹಂತದ ಪರೀಕ್ಷೆಗೆ ಅಂದರೆ ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. 

ಮೂರನೇ ಹಂತದ ಪರೀಕ್ಷೆ : ವೈದ್ಯಕೀಯ ಪರೀಕ್ಷೆ (Medical Examination)

ಕೊನೆಯ ಹಂತದ ಪರೀಕ್ಷೆಯ ಭಾಗವಾಗಿ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ Medical Examination ನಡೆಯುತ್ತದೆ. ಈ ಹಂತದಲ್ಲಿ ಅಭ್ಯರ್ಥಿಯ BSF ನ ಅಧಿಕೃತ ನಿಯಮದ ಪ್ರಕಾರ ಅನೇಕ ಪರೀಕ್ಷೆಗಳು ನಡೆಯಲಿದ್ದು, ಇವುಗಳನ್ನು  ಸಹ ಅಭ್ಯರ್ಥಿಯು ದಾಟಬೇಕು. 

 

ಈ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರು ಮಾಡಲಾಗುತ್ತದೆ. ಈ ಮೆರಿಟ್ ಪಟ್ಟಿಯ ಪ್ರಕಾರ ಖಾಲಿ ಇರುವ ಹುದ್ದೆಗಳ ಅಂಕೆಗೆ ಸರಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಹುದ್ದೆಗೆ ಹಾಜರಾಗಲು ಪತ್ರ ಕಳುಹಿಸಲಾಗುತ್ತದೆ. 

Important Links for BSF Recruitment 2024 SI Selection Process

FAQ for BSF Recruitment 2024 SI Selection Process


Share the Info

Leave a Comment