Library Supervisor Recruitment 2024: ”Jobs in Davanagere Gram Panchayat”, 16 Posts, Check eligibility, Qualification, Salary, How to Apply, Selection Process

Share the Info

Grama Panchayath Library Supervisor Recruitment 2024: Full details on how to apply for Library supervisor post in Grama Panchayath

Library Supervisor Recruitment 2024: ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಒಟ್ಟು 16 ಮೇಲ್ವಿಚಾರಕಿ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು, ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಅಭ್ಯರ್ಥಿಗಳಿಂದ Online ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಡಿಯಲ್ಲಿ ಈ ನೇಮಕಾತಿ ನಡೆಯಲಿದೆ. ಗ್ರಾಮ ಪಂಚಾಯತಿನ ಗಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ(Library Supervisor Recruitment 2024) ಅಥವಾ ಗ್ರಂಥಪಾಲಕ ಹುದ್ದೆಗೆ(Librarian Recruitment) ಅರ್ಜಿ ಸಲ್ಲಿಸಲು ಇರಬೇಕಾದ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀವು ಪಡೆಯಬಹುದು. 

ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ನಲ್ಲಿ ಖಾಲಿ ಇರುವ ಒಟ್ಟು 16 ಗ್ರಂಥಪಾಲಕರ (Librarian Post) ಅಥವಾ ಮೇಲ್ವಿಚಾರಕರ ನೇಮಕಾತಿಗೆ (Library Supervisor Recruitment 2024) ಅಧಿಸೂಚನೆಯನ್ನು ಈಗಾಗಲೇ ನೇಮಕಾತಿ ಪ್ರಾಧಿಕಾರ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಡೌನ್ಲೋಡ್ ಲಿಂಕ್ ಬಳಸಿ Notification ಅನ್ನು ಡೌನ್ಲೋಡ್  ಮಾಡಿಕೊಳ್ಳಬಹುದು. ಹಾಗೇನೇ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ಪಡೆಯಬಹುದು. ಲೇಖನವನ್ನು ಕೊನೆಯ ತನಕ ಓದಿ ಅರ್ಥೈಸಿಕೊಳ್ಳಿ. 

ಉದ್ಯೋಗಾಕಾಂಕ್ಷಿಗಳಿಗೋಸ್ಕರ ಹಲವು ಮೂಲಗಳನ್ನು ತಡಕಾಡಿ ಸಾಕಷ್ಟು ಮಾಹಿತಿಯನ್ನು ಒಟ್ಟು ಮಾಡಿ ನಾವು ನಿಮಗೆ ಈ ವೆಬ್ಸೈಟ್ ನಲ್ಲಿ ಒದಗಿಸಲು ಪ್ರಯತ್ನಪಡುತ್ತಿದ್ದೇವೆ. ಈಗಾಗಲೇ ನಾವು ಒದಗಿಸಿದ ಉದ್ಯೋಗ ಮಾಹಿತಿಯಿಂದ ಹಲವು ಅದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗಿದ್ದು, ಕನಸನ್ನು ನನಸು ಮಾಡಿಕೊಂಡಿರುತ್ತಾರೆ. ನಿಮಗೂ ಪ್ರಯೋಜನವಾಗಿದ್ದರೆ, ಈ ಲೇಖನದ ಕೊನೆಯಲ್ಲಿ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದು ತಿಳಿಸಿ. ಅಥವಾ ನೀವು ನಮ್ಮ careerlive ವೆಬ್ಸೈಟ್ ಗೆ ಹೊಸಬರಾಗಿದ್ದರೆ, ನೀವು ಈಗಲೇ ನಮ್ಮ ವೆಬ್ಸೈಟ್ ನ Notification ಅನ್ನು Enable ಮಾಡಿಕೊಳ್ಳಿ. ಅಥವಾ ನಮ್ಮ Whatsapp Group ಮತ್ತು Whatsapp Channel ಅನ್ನು ಸೇರಿಕೊಳ್ಳಿ. ಇದರಿಂದ ನಾವು ಒದಗಿಸುವ ಉದ್ಯೋಗ ಮಾಹಿತಿಯು ಎಲ್ಲರಿಗಿಂತ ಮೊದಲು ನಿಮಗೆ ತಲುಪುತ್ತದೆ. 

Basic Information about Library Supervisor Recruitment 2024

Post NameLibrarian or Library Supervisor Post
DepartmentGrama Panchayath Library and Information Centre, Davanagere
Notification NumberRDPR 156 GPA 2022
Number of Post16
Application ModeOnline
Selection ModeInterview
QualificationPUC + Certificate Course
Salary15,196 Rs
Age Limit35 Years
Last Date20-07-2024
Library Supervisor Recruitment 2024

Eligibility Criteria to Apply for Library Supervisor Recruitment 2024

Qualification

Library Supervisor Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PUC ಅಥವಾ ಪದವಿ ಪೂರ್ವ ಶಿಕ್ಷಣವನ್ನು ಉತ್ತಮ ಅಂಕಗಳೊಂದಿಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಮುಂಚಿತವಾಗಿ ಮುಗಿಸಿರಬೇಕು. 

Careerlive Whatsapp Channel (2)
Careerlive Whatsapp Group (1)

Librarian ಅಥವಾ Library Supervisor  ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ  Library Course Certificate ಪಡೆದಿರಬೇಕು. ಒಂದು ವೇಳೆ ಅರ್ಜಿ ಸಲ್ಲಿಸಿದ ಯಾವುದೇ ಅಭ್ಯರ್ಥಿ ಗ್ರಂಥಪಾಲಕ ಕೋರ್ಸ್ ಪ್ರಮಾಣಪತ್ರ ಪಡೆಯದಿದ್ದರೆ, ಅಂತಹ ಸಂಧರ್ಭದಲ್ಲಿ ಪದವಿಪೂರ್ವ ಶಿಕ್ಷಣದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. 

ಅಭ್ಯರ್ಥಿಗಳು ಕನಿಷ್ಠ ಆರು ತಿಂಗಳ computer course ಅನ್ನು ಕಡ್ಡಾಯವಾಗಿ ಅಧಿಕೃತ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಿಂದ ಪಡೆದಿರಬೇಕು. 

Vidyamatha Ad

Age Limitation

Library Supervisor Recruitment 2024 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು Library Supervisor Recruitment 2024 Notification ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಟ 35 ವರ್ಷ ವಯಸ್ಸಾಗಿರಬೇಕು. ವಿವಿಧ ಜಾತಿ ಮತ್ತು ವರ್ಗಗಳಿಗೆ ಅನುಗುಣವಾದ ವಯೋಮಿತಿ ಸಡಿಲಿಕೆ ನೀಡಲಾಗಿದೆ. 

Age Relaxation

ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ತಮ್ಮ ಜಾತಿ ಮತ್ತು ವರ್ಗಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆಯ ಪ್ರಯೋಜನ ಪಡೆಯಬಹುದು. 

CetegoryYears
ಸಾಮಾನ್ಯ ವರ್ಗ (General Category)No
ಇತರ ಹಿಂದುಳಿದ ವರ್ಗ (2A, 2B, 3A, 3B)3 Year
ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ(1)5 Years
ವಿಶೇಷ ಚೇತನರು ಮತ್ತು ವಿಕಲಾಂಗರು10 Years
ಮಾಜಿ ಸೈನಿಕರುService Year + 3 Years
ವಿಧವಾ ಅಭ್ಯರ್ಥಿ10 years
ತೃತೀಯ ಲಿಂಗಿಗಳುSpecial Concession
ಎನ್ ಸಿ ಸಿ (National Cadet Corps)Total Service years

Other Requirements

  • ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಮುಖ್ಯವಾಗಿ ನೇಮಕವಾಗುವ ಪಂಚಾಯ್ತಿಯ ಗ್ರಾಮವಾದವರಾಗಿರಬೇಕು. 
  • ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರವೇಕು 
  • ಅಭ್ಯರ್ಥಿಯು ಒಬ್ಬ ಜೀವಂತ ಪತ್ನಿಗಿಂತ ಹೆಚ್ಚಿನ ಪತ್ನಿ ಹೊಂದಿರಬಾರದು. 
  • ಒದಗಿಸುವ ಎಲ್ಲಾ ದಾಖಲೆಗಳು ಇತ್ತೀಚಿನದ್ದಾಗಿರಬೇಕು. 
  • ಅಭ್ಯರ್ಥಿಯು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 
  • ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಂತಹ ಅಭ್ಯರ್ಥಿ ಅನರ್ಹ. 
  • ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಜೋಡಣೆಯಾಗಿರಬೇಕು
  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ಒದಗಿಸುವ ಮೊಬೈಲ್ ಸಂಖ್ಯೆ ಮತ್ತು ಇತರ ದಾಖಲೆಗಳು ಅಂತಿಮವಾಗಿರುತ್ತದೆ. 
  • ಅಭ್ಯರ್ಥಿಗೆ ಕನ್ನಡ ಭಾಷೆ ಓದಲು, ಬರೆಯಲು, ಮತ್ತು ಅರ್ಥ ಮಾಡಿಕೊಳ್ಳಲು ಕಡ್ಡಾಯವಾಗಿ ಬರಬೇಕು. 
  • ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೂ ಅಭ್ಯರ್ಥಿಯ ಪ್ರಥಮ ಭಾಷೆಯಾಗಿರಬೇಕು. 
  • ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. 

Required Documents for Library Supervisor Recruitment 2024

ಗ್ರಂಥ ಪಾಲಕರು ಅಥವಾ ಮಾಹಿತಿ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒದಗಿಸುವ ದಾಖಲೆಗಳು ಸ್ವಯಂ ಧೃಢೀಕೃತವಾಗಿರಬೇಕು. ಎಲ್ಲಾ ದಾಖಲೆಗಳು ಮತ್ತು ಪ್ರಮಾಣಪತ್ರಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಪಡೆದಿರಬೇಕು. ನೇರ ಸಂದರ್ಶನ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

ಅಭ್ಯರ್ಥಿಯು ಲಗತ್ತಿಸುವ ಯಾವುದೇ ದಾಖಲೆಗಳು ಸುಳ್ಳು ಅಥವಾ ನಕಲಿ ಎಂದು ಕಂಡುಬಂದಲ್ಲಿ ಅಂತ ಅಭ್ಯರ್ಥಿಯ ನೇಮಕಾತಿಯನ್ನು ಯಾವುದೇ ಸಮಯದಲ್ಲೂ ರದ್ದು ಮಾಡುವ ಅಧಿಕಾರ ನೇಮಕಾತಿ ಮಂಡಳಿಗೆ ಇರುತ್ತದೆ. ಮತ್ತು ಅಂತಹ ಅಭ್ಯರ್ಥಿಗಳ ವಜಾ ಗೊಳಿಸಿ, ಕಾನೂನು ಮೊಕದ್ದಮೆ ಹೂಡಲು ಅವಕಾಶವಿದೆ. 

  • ಶೈಕ್ಷಣಿಕ ವಿದ್ಯಾಭ್ಯಾಸ ಪ್ರಮಾಣಪತ್ರಗಳು (SSLC, PUC)
  • ಸರ್ಟಿಫಿಕೇಶನ್‌ ಕೋರ್ಸ್‌ ಮತ್ತು ಲೈಬ್ರರಿ ಸೈನ್ಸ್‌ ವಿಷಯದಲ್ಲಿ ಪಡೆದ ಪ್ರಮಾಣ ಪತ್ರ
  • ಜನನ ಪ್ರಮಾಣಪತ್ರ ಅಥವಾ SSLC ಪ್ರಮಾಣಪತ್ರ (ವಯಸ್ಸಿನ ದೃಢೀಕರಣಕ್ಕೆ)
  • ಕನ್ನಡ ಮಾಧ್ಯಮದ ವ್ಯಾಸಂಗ ಪ್ರಮಾಣ ಪತ್ರ
  • ವಾಸ್ತವ್ಯ ಪ್ರಮಾಣಪತ್ರ 
  • ಜಾತಿ ಮತ್ತು ಆದಾಯ ಪ್ರಮಾಣಪತ್ರ 
  • ಆಧಾರ್ ಕಾರ್ಡ್ 
  • ಸೆಲ್ಫ್‌ ಅಟೆಸ್ಟೆಡ್‌  ಪಾಸ್ಪೋರ್ಟ್ ಸೈಜ್ ಫೋಟೋಗಳು 
  • ಅರ್ಜಿ ಸಲ್ಲಿಸಿದ ಪ್ರತಿ 
  • ಅರ್ಜಿ ಶುಲ್ಕ ಪಾವತಿ ಪುರಾವೆ ಪ್ರತಿ 
  • ಸ್ವ ಸಹಿ ಮಾಡಿದ ಪ್ರತಿ 
  • ಅಂಗವಿಕಲ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ವಿಧವಾ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಮಾಜಿ ಸೈನಿಕ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಎನ್ ಸಿ ಸಿ ಉದ್ಯೋಗ ಅನುಭವ ಪ್ರಮಾಣಪತ್ರ(ಅಗತ್ಯವಿದ್ದಲ್ಲಿ)

Selection Process of Library Supervisor Recruitment 2024

Library Supervisor Recruitment 2024 ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಕೇವಲ ಅಭ್ಯರ್ಥಿಯು ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. 

ಅಭ್ಯರ್ಥಿಯು ಲೈಬ್ರರಿ ಸೈನ್ಸ್ ನಲ್ಲಿ ಪದವಿ ಪಡೆದಿದ್ದರೆ ಮತ್ತು ಕಂಪ್ಯೂಟರ್ ಜ್ಞಾನ ದ ಪ್ರಮಾಣ ಪತ್ರ ಹೊಂದಿದ್ದರೆ, ಅಂತಹ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 

ಒಂದು ವೇಳೆ ಲೈಬ್ರರಿ ಸೈನ್ಸ್ ಪದವಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ, ಅಂತಹ ಸಂಧರ್ಭದಲ್ಲಿ ಅಭ್ಯರ್ಥಿಯು ಪದವಿ ಪೂರ್ವ ಶಿಕ್ಷಣದಲ್ಲಿ (PUC) ಪಡೆದ ಅಂಕಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಯನ್ನು ಪರಿಗಣಿಸಿ Library Supervisor ಅನ್ನು ಆಯ್ಕೆ ಮಾಡಲಾಗುತ್ತದೆ. 

ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆಗಳ ಮತ್ತು ಪ್ರಮಾಣಪತ್ರಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಒಂದು ಈ ಸಂದರ್ಭದಲ್ಲಿ ಅಭ್ಯರ್ಥಿಯು ಹಾಜರಾಗದಿದ್ದಲ್ಲಿ ಅಥವಾ ದಾಖಾನೆಗಳನ್ನು ಒದಗಿಸುವಲ್ಲಿ ವಿಫಲರಾದಲ್ಲಿ, ಅಂತಹ ಅಭ್ಯರ್ಥಿಯ ನೇಮಕಾತಿ ರದ್ದತಿ ಮಾಡಲಾಗುತ್ತದೆ. 

How to Apply for Library Supervisor Recruitment 2024

ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ Library Supervisor Recruitment 2024 Notification ಅನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಹಾಗೇನೇ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಸೆಲ್ಫ್ ಅಟ್ಟೆಸ್ಟೆಡ್ ಮಾಡಿಕೊಂಡು ಡಿಜಿಟಲ್ ಪ್ರತಿ ಇಟ್ಟುಕೊಂಡಿರಬೇಕು. ಅರ್ಜಿ ನಮೂನೆ ಭರ್ತಿ ಮಾಡುವ ಸಂಧರ್ಭದಲ್ಲಿ ಒದಗಿಸಿದ ಮಾಹಿತಿಯು ಅಂತಿಮವಾಗಿರುತ್ತದೆ. ಮತ್ತು ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶವಿರುವುದಿಲ್ಲ. 

ಅಭ್ಯರ್ಥಿಯು ದಾವಣಗೆರೆ ಜಿಲ್ಲಾ ಪಂಚಾಯತ್ ನ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಓಪನ್ ಮಾಡಬಹುದು ಅಥವಾ ಈ ಲೇಖನದ ಕೊನೆಗೆ ಕೊಟ್ಟಿರುವ Apply Online ಬಟನ್ ಅನ್ನು ಬಳಸಿ ಅರ್ಜಿ ನಮೂನೆಯನ್ನು ಓಪನ್ ಮಾಡಬೇಕು. 

ಅರ್ಜಿಯಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ. ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ. ಸ್ವೀಕೃತಿಯನ್ನು ಪಡೆದುಕೊಳ್ಳಿ. 

ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಂತರ ಸ್ವೀಕೃತಿ ಪಡೆದುಕೊಂಡು, ಇತರ ದಾಖಲೆಗಳೊಂದಿಗೆ ಲಗತ್ತಿಸಿ, ದಿನಾಂಕ 20-7-2024 ಕ್ಕೆ ಮುಂಚಿತವಾಗಿ ಜಿಲ್ಲಾ ಪಂಚಾಯತ್ ಕಚೇರಿಗೆ ತಲುಪಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. 

Application Fees for Library Supervisor Recruitment 2024

CetegoryFees
ಸಾಮಾನ್ಯ ವರ್ಗ (General Category)Rs.500
ಇತರ ಹಿಂದುಳಿದ ವರ್ಗ (2A, 2B, 3A, 3B)Rs.300
ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ(1)Rs.200
ವಿಶೇಷ ಚೇತನರು ಮತ್ತು ವಿಕಲಾಂಗರುRs.100
ಮಾಜಿ ಸೈನಿಕರುRs.200

 

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ ಶುಲ್ಕ ಪಾವತಿ QR ಕೋಡ್ ಬಳಸಿ ಶುಲ್ಕವನ್ನು ಪಾವತಿ ಮಾಡಬಹುದು. ಅಥವಾ ಕೆಳಗೆ ಕೊಟ್ಟಿರುವ ಬ್ಯಾಂಕ್ ವಿಳಾಸಕ್ಕೆ NEFT ಮಾಡಬಹುದು. 

ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಿದ ಚಲನ್ ಅನ್ನು ಪ್ರಿಂಟ್ ಮಾಡಿ ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕು.  

Bank Account Details

Account NameChief Account Officer Zilla Panchayath Davanagere
Account Number54042043217
Bank NameState Bank Of India
IFSC CodeSBIN0040108
MICR Code577002009

Important Links to Apply for Library Supervisor Recruitment 2024

Library Supervisor Recruitment 2024 NotificationDownload Now
Davanagere Jilla Panchayath Official WebsiteVisit Now
Library Supervisor Recruitment Online ApplicationApply Now
Career Live Home PageVisit Now
Careerlive Whatsapp GroupJoin Now
Careerlive Whatsapp ChannelFollow Now

Read Also :

FAQ

Q: What is the last date to apply for Gram Panchayat Library and Information Center Supervisor posts in Davanagere Jilla Panchayath?

A: 20-07-2024

Q: How many Gram Panchayat Library and Information Center Supervisor posts are there to be filled in Davanagere Jilla Panchayat?

A: 16

Q: Is there age relaxation for Widow Candidates for Gram Panchayat Library and Information Center Supervisor posts in Jilla Panchayat?

A: Widow candidates have 10 Years age relaxation for the Gram Panchayat Library and Information Center Supervisor posts

Q: Can ex army apply for Gram Panchayat Library and Information Center Supervisor posts in grama panchayat davanagere?

A: Yes, Ex-Army can apply for the post. 

Q: What is the qualification required to apply for Gram Panchayat Library and Information Center Supervisor posts in Grama Panchayath Davanagere

A: PUC+Librarian Course Certificate. 


Share the Info
Vidyamatha Ad 2

Leave a Comment