Indian Air Force Agniveer Vayu Recruitment 2025: Indian Air Force Agniveer Vayu Intake [2/2025]: Notification Release, Application Date, Eligibility, Qualification, How to Apply

Share the Info

Indian Air Force Agniveer Vayu Recruitment 2025: ನೀವು ಈ ಮಾಹಿತಿಯನ್ನು ಓದುತ್ತಿರುವಿರಾದರೆ, ಮೊದಲು ನಿಮ್ಮ ಮನೆಯ, ನಿಮ್ಮ ಸುತ್ತಮುತ್ತಲಿನ, ನಿಮ್ಮ ಹತ್ತಿರದ ಶಾಲೆಯ, ನಿಮ್ಮ ಸಂಬಂಧಿಕರ ಮನೆಯ, ದೇಶ ಸೇವೆ ಮಾಡಬೇಕೆಂಬ ತುಡಿತದಲ್ಲಿರುವ ಯುವ ಉತ್ಸಾಹಿ ತರುಣ ತರುಣಿಯರಿಗೆ ಶೇರ್ ಮಾಡಿ ಅಥವಾ ಕಳುಹಿಸಿ ಅಥವಾ ಫೋನ್ ಮೂಲಕ ಈ ಅವಕಾಶದ ಬಗ್ಗೆ ತಪ್ಪಷ್ಟೇ ತಿಳಿಸಿ. 

 

ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು(Agniveer Vayu Intake) ಹುದ್ದೆಯ ನೇಮಕಾತಿಗಾಗಿ ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಆಯ್ಕೆಗಾಗಿ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ. Agniveer Vayu ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಯುವ ಅಭ್ಯರ್ಥಿಗಳು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಅರ್ಜಿ ಸಲ್ಲಿಸುವ ಬಗ್ಗೆ, ಅರ್ಹತಾ ಮಾನದಂಡಗಳು, ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬಹುದು. ಎಲ್ಲಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಅರ್ಜಿ ಸಲ್ಲಿಸಿ.. 

Careerlive Telegram Channel
Careerlive Whatsapp Channel
Careerlive Whatsapp Group

 

ಈಗಾಗಲೇ ಜನವರಿಯಲ್ಲಿ ಒಂದು ಹಂತದ ನೇಮಕಾತಿ ಪ್ರಕ್ರಿಯೆ ನಡೆದಿರುತ್ತದೆ. ಈ ಸಲದ Indian Air Force Agniveer Vayu Recruitment 2025 ನೇಮಕಾತಿಯು ಜುಲೈ-ಆಗಷ್ಟ್ ನಲ್ಲಿ ನಡೆಯಲಿದ್ದು ಈಗಾಗಲೇ Indian Air Force Agniveer Recruitment Notification ಅನ್ನು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ  Agniveer Vayu Recruitment Notification download ಮಾಡಿಕೊಳ್ಳಬಹುದು. 

 

ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.

Basic Information on Indian Air Force Agniveer Vayu Recruitment 2025

Post NameAGNIVEER VAYU
OrganizationIndian Air Force (IAF)
Vacancies2500+
QualificationSSLC/PUC/Diploma
Application ModeOnline
Notification NumberAGNIVEER_VAYU_02-2025
SalaryRs. 30,000 to Rs. 40,000
Registration Start On8 July 2024
Last Date28 July 2024
Indian Air Force Agniveer Vayu Recruitment 2025

Eligibility Criteria to apply for Agniveer Vayu

Agniveer Vayu ಹುದ್ದೆಗೆ ಅರ್ಜಿ ಸಲ್ಲಿಸಲು ವಿವಿಧ ಅರ್ಹತಾ ಮಾನದಂಡಗಳನ್ನು ಭಾರತೀಯ ವಾಯು ಸೇನೆ ನಿಗದಿಪಡಿಸಿದ್ದು, ಅವುಗಳನ್ನು ಪೂರೈಸುವ ಅಭ್ಯರ್ಥಿಗಳ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಅರ್ಹತಾ ಮಾನದಂಡಗಳು ಗಂಡು ಮತ್ತು ಹೆಣ್ಣು ಅಭ್ಯರ್ಥಿಗಳಿಗೆ ಇಬ್ಬರಿಗೂ ಅನ್ವಯಿಸುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ, ದೈಹಿಕ ಮತ್ತು ವಯೋಮಿತಿಯ ಮಾನದಂಡಗಳು ಈ ಕೆಳಗಿನಂತೆ ಹೊಂದಿರಬೇಕು. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

 

Educational Qualification:

ರಾಜ್ಯ ಅಥವಾ ಕೇಂದ್ರ ಶಿಕ್ಷಣ ಮಂಡಳಿಯಿಂದ ಅನುಮೋದನೆಗೊಂಡ ಶಿಕ್ಷಣ ಸಂಸ್ಥೆಯಿಂದ ಅಭ್ಯರ್ಥಿಗಳು 50% ಅಂಕಗಳೊಂದಿಗೆ SSLC ಉತ್ತೀರ್ಣರಾಗಿರಬೇಕು. ಮತ್ತು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿರುವ ಶಿಕ್ಷಣ ಮಂಡಳಿಗಳಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ Intermediate/PUC/10+2/ ತತ್ಸಮಾನ ಪರೀಕ್ಷೆಯಲ್ಲಿ ಮತ್ತು ಇಂಗ್ಲಿಷ್‌ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಮೂರೂ ವರ್ಷದ Diploma Course in Engineering 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

 

Age Limitation:

ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಮೀರದಂತೆ ಅಭ್ಯರ್ಥಿಯ ವಯಸ್ಸು 21ವರ್ಷ  ಅಥವಾ ಅದರೊಳಗಿರಬೇಕು. ಅಭ್ಯರ್ಥಿಯ ವಯಸ್ಸು ಕನಿಷ್ಠ 17.5 ವರ್ಷ ಆಗಿರಬೇಕು. ಅಂದರೆ ಅಭ್ಯರ್ಥಿಯು 03 July 2004 ಮತ್ತು 03 January 2008 ದಿನಾಂಕಗಳನ್ನೂ ಸೇರಿಸಿ, ಇದರ ಮಧ್ಯೆ ಜನಿಸಿರಬೇಕು.

 

Marital Status:

Indian Air Force Agniveer Vayu Recruitment 2025 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿವಾಹಿತರಾಗಿರಬಾರದು. ಹೆಣ್ಣು ಮತ್ತು ಗಂಡು ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು. ಮತ್ತು ಸೂಚಿಸಿದ ವಯೋಮಿತಿಯನ್ನು ಹೊಂದಿರಬೇಕು.

 

General Medical Standards:

ಗಂಡುಹೆಣ್ಣು
ಎತ್ತರ152.5 cms152 cms
ತೂಕಎತ್ತರಕ್ಕೆ ಸರಿಯಾಗಿ ತೂಕ ಇರಬೇಕುಎತ್ತರಕ್ಕೆ ಸರಿಯಾಗಿ ತೂಕ ಇರಬೇಕು
ಎದೆ ಅಳತೆಕನಿಷ್ಠ 77 cms(5 cms Expandable)5 cms Expandable
ಕಿವಿ ಅರೋಗ್ಯ6 ಮೀಟರ್ ದೂರದಿಂದ ಮಾತು ಕೇಳಲು ಸಾಧ್ಯವಿರಬೇಕು6 ಮೀಟರ್ ದೂರದಿಂದ ಮಾತು ಕೇಳಲು ಸಾಧ್ಯವಿರಬೇಕು
ಹಲ್ಲಿನ ಅರೋಗ್ಯಆರೋಗ್ಯಕರ ಒಸಡುಗಳು, ಉತ್ತಮ ಹಲ್ಲುಗಳನ್ನು ಹೊಂದಿರಬೇಕುಆರೋಗ್ಯಕರ ಒಸಡುಗಳು, ಉತ್ತಮ ಹಲ್ಲುಗಳನ್ನು ಹೊಂದಿರಬೇಕು
ದೃಷ್ಟಿಕೋನಎರಡೂ ಕಣ್ಣಿನ ದೃಷ್ಟಿ 6/12, 6/6 ಗೆ ಸರಿಯಾಗಿರಬೇಕುಎರಡೂ ಕಣ್ಣಿನ ದೃಷ್ಟಿ 6/12, 6/6 ಗೆ ಸರಿಯಾಗಿರಬೇಕು

Required Documents to Apply for Agniveer Vayu 2025

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಕೆಳಗಿನ ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ನಿಮ್ಮ ಮೊಬೈಲ್ ನಲ್ಲಿ ಅಥವಾ ಡ್ರೈವ್ ನಲ್ಲಿ ಇಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಗತ್ಯ ದಾಖಲೆಗಳ ಪ್ರತಿಯನ್ನು ನೀವು ಆನ್ಲೈನ್ ನಲ್ಲಿ ಲಗತ್ತಿಸಬೇಕಾಗುತ್ತದೆ. ಅಭ್ಯರ್ಥಿಗಳ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಸ್ವಯಂ ದೃಢೀಕೃತವಾಗಿರಬೇಕು. 

 

ಒಂದು ವೇಳೆ ನೀವು ಸಲ್ಲಿಸಿದ ದಾಖಲೆ ಪ್ರಮಾಣಪತ್ರಗಳು ಸುಳ್ಳು ಅಥವಾ ನಕಲಿ ಎಂದು ಸಾಬೀತಾದಲ್ಲಿ ಅಂತಹ ಅಭ್ಯರ್ಥಿಯ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ನೇಮಕಾತಿ ಬೋರ್ಡ್(Selection Board) ಗೆ ಇರುತ್ತದೆ.  

 

 

  • ಆಧಾರ್ ಕಾರ್ಡ್ ಪ್ರತಿ 
  • ಶೈಕ್ಷಣಿಕ ಪ್ರಮಾಣಪತ್ರ 
  • ವಾಸ್ತವ ಪ್ರಮಾಣಪತ್ರ 
  • ಜಾತಿ ಪ್ರಮಾಣಪತ್ರ 
  • ಜನನ ಪ್ರಮಾಣಪತ್ರ 
  • ಬಯೋಡೇಟಾ 
  • ಅಭ್ಯರ್ಥಿ ಸಹಿ ಹಾಕಿರುವ ಪ್ರತಿ 
  • ಅಭ್ಯರ್ಥಿಯ ಹೆತ್ತವರು ಸಹಿ ಹಾಕಿರುವ ಪ್ರತಿ (ಅಭ್ಯರ್ಥಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ)
  • 2 ಪಾಸ್ಪೋರ್ಟ್ ಸೈಜ್ ಫೋಟೋ

How to Apply for Indian Air Force Agniveer Vayu Recruitment 2025

Agniveer Vayu ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Online ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಾಯುಸೇನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅಭ್ಯರ್ಥಿಗಳಿಗೆ ಸುಲಭವಾಗಲಿ ಎಂಬ ಉದ್ದೇಶದಿಂದ ನಾವು ಈ ಲೇಖನದ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಸೂಚನೆಯ ಡೌನ್ಲೋಡ್ ಲಿಂಕ್ ಅನ್ನು ಕೊಟ್ಟಿದ್ದೇವೆ. ಅಭ್ಯರ್ಥಿಗಳು ಮೊದಲು ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಓದಿದ ನಂತರ ಅರ್ಜಿ ಸಲ್ಲಿಸಬೇಕು. 

 

ನೆನಪಿಟ್ಟುಕೊಳ್ಳಿ, ಅರ್ಜಿ ಸಲ್ಲಿಸುವ ಲಿಂಕ್ 08 July 2024 ಕ್ಕೆ ತೆರೆದುಕೊಳ್ಳಲಿದೆ. ಅಲ್ಲಿ ತನಕ ಅಭ್ಯರ್ಥಿಗಳು ಈ ಹುದ್ದೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಿ. 

 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ Valid Email Id ಮತ್ತು ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇರವುದು ಕಡ್ಡಾಯವಾಗಿದೆ. 

 

ಕೊಟ್ಟಿರುವ ಅಧಿಸೂಚನೆಯನ್ನು ಓದಿದ ನಂತರ ಕೆಳಗೆ ಕೊಟ್ಟಿರುವ Apply Online ಬಟನ್ ಅನ್ನು ಒತ್ತಿ. ಆಗ ನೇರವಾಗಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. 

 

ಅರ್ಜಿಯಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಾದ ದಾಖಲೆಗಳನ್ನು ಲಗತ್ತಿಸಿ. 

 

Application Fees ಅಥವಾ Examination Fees ಅನ್ನು ಭರಿಸಿ. ಪರೀಕ್ಷಾ ಶುಲ್ಕದ ರೂಪದಲ್ಲಿ Rs. 550/- + GST ಅನ್ನು ಅಭ್ಯರ್ಥಿಯು ಸೂಚಿತ ಬ್ಯಾಂಕ್ ಮುಖಾಂತರ ಭರಿಸಬೇಕಾಗುತ್ತದೆ. 


ಕೊನೆಗೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳಿ. ಮತ್ತು ರಿಜಿಸ್ಟ್ರೇಷನ್ ನಂಬರ್ ಹಾಗೂ ನಿಮ್ಮ User Id ಮತ್ತು Password ನ್ನು ಬರೆದಿಟ್ಟುಕೊಳ್ಳಿ.

Selection Process of Indian Air Force Agniveer Vayu Recruitment 2025

Agniveer Vayu ಹುದ್ದೆಯ ಆಯ್ಕೆ ಪ್ರಕ್ರಿಯೆ ಮೂರು ಹಂತದಲ್ಲಿ ನಡೆಯಲಿದೆ. ಅಭ್ಯರ್ಥಿಗಳು Indian Air Force Agniveer Recruitment Notification 2025 ಅನ್ನು ಸರಿಯಾಗಿ ಓದಿಕೊಂಡು ನಿಯಮ ಮತ್ತು ಷರತ್ತನ್ನು ಅರ್ಥೈಸಿ ಅರ್ಜಿಯನ್ನು ಸಲ್ಲಿಸಬೇಕು.

 

ಅರ್ಜಿ ಪರಿಶೀಲನೆ (Application Verification)

ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಆಯ್ಕೆ ತಂಡ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಹ ಅರ್ಜಿಯನ್ನು ಮನ್ನಣೆಗೆ ತೆಗೆದುಕೊಂಡು ಅಂಥವರಿಗೆ  Website ನಲ್ಲಿ ಮುಂದಿನ ಪ್ರಮುಖ ಹಂತದ ಪರೀಕ್ಷೆಗೆ Admit Card ಅನ್ನು ಕಳುಹಿಸಲಾಗುತ್ತದೆ.

 

ಲಿಖಿತ ಪರೀಕ್ಷೆ (Online Test)

ಪ್ರವೇಶ ಪತ್ರವನ್ನು ಪಡೆದ ಅಭ್ಯರ್ಥಿಗಳು ಇಲಾಖೆ ಗೊತ್ತು ಪಡಿಸಿದ ದಿನಾಂಕಕ್ಕೆ ಮತ್ತು ಪರೀಕ್ಷೆಯ ಸೆಂಟರ್ ಅನ್ನು ತಿಳಿದು ಲಿಖಿತ ಪರೀಕ್ಷೆಗೆ ಸಿದ್ಧರಾಗಬೇಕು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಹಂತದ ಪರೀಕ್ಷೆಗೆ ಹೊಸ ಪ್ರವೇಶ ಪತ್ರವನ್ನು Indian Air Force Agniveer ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

 

ದೈಹಿಕ ಕ್ಷಮತೆ ಪರೀಕ್ಷೆ (Physical Fitness Test (PFT))

ಪ್ರವೇಶ ಪತ್ರವನ್ನು ಪಡೆದ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಮತ್ತು ಪ್ರವೇಶ ಪತ್ರದೊಂದಿಗೆ ದೈಹಿಕ ಕ್ಷಮತೆ ಪರೀಕ್ಷೆಗೆ(PFT)  ಹಾಜರಾಗಬೇಕು. PFT ಯಾವುದೆಲ್ಲಾ ಪರೀಕ್ಷೆ ಇದೆ ಎಂಬುದನ್ನು ಅಧಿಸೂಚನೆಯಲ್ಲಿ ವಿವರವಾಗಿ ತಿಳಿಯಬಹುದು.  ಪ್ರಮುಖವಾಗಿ Running(1.6 KM) , Push-ups(10), Sit-ups(10), Squat Test(20) ಪರೀಕ್ಷೆಗಳು ಇರುತ್ತವೆ. ಇದರ ಬಗ್ಗೆ ಸವಿವರವಾಗಿ ತಿಳಿದುಕೊಂಡು ಈ ಪರೀಕ್ಷೆಗಳಿಗೆ ಸಿದ್ಧರಾಗಬೇಕು.

 

ಹೊಂದಿಕೊಳ್ಳುವಿಕೆ ಪರೀಕ್ಷೆ (Adaptability Test)

ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳು ವಾಯುಪಡೆಯ ನಿಯಮ ಪ್ರಕಾರ ಕಡ್ಡಾಯವಾಗಿ ಹೊಂದಿಕೊಳ್ಳುವ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಇದು ಓರ್ವ ಹೊಸ ಅಭ್ಯರ್ಥಿಯು ಭಾರತೀಯ ವಾಯುಪಡೆಯ ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಮಿಲಿಟರಿ ಜೀವನ ವಿಧಾನಕ್ಕೆ ಹೊಂದಿಕೊಳ್ಳುವ ಬಗ್ಗೆ ಇರುವಂತಹ ಪರೀಕ್ಷೆಯಾಗಿದೆ.

 

ವೈದ್ಯಕೀಯ ಪರೀಕ್ಷೆ (Medical Examination)

ಮೇಲಿನ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. IAF medical standards ಪ್ರಕಾರ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು Air Force Medical Team ಮಾಡುತ್ತದೆ.

Important Links of Indian Air Force Agniveer Vayu Recruitment 2025

Download Indian Air Force Agniveer Vayu Recruitment Notification 2025Download Now
Official Website of agnipathvayuClick Here
Check Guidelines for Online ApplicationClick Here
Careerlive Home PageClick Here
Careerlive Whatsapp GroupJoin Now
Careerlive Whatsapp ChannelJoin Now
Agniveer Vayu Online Application FormNotify Soon

Important Date for Agniveer Vayu Recruitment 2025

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ08-07-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28-07-2024
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ28-07-2024
ಒಂದನೇ ಹಂತದ ಆನ್‌ಲೈನ್ ಪರೀಕ್ಷೆಯ ದಿನಾಂಕ18-10-2024
PSL ನ ಪ್ರಕಟಣೆಯ ದಿನಾಂಕ14-05-2025
ದಾಖಲಾತಿ ಪಟ್ಟಿಯನ್ನು ಪ್ರಕಟಿಸುವ ದಿನಾಂಕ30-05-2025

Special Information

ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ಸುಮಾರು 4 ವರ್ಷಗಳ ಕಾಲ ಭಾರತ ಮಾತೆಯ ಸೇವೆ ಮಾಡಲು ಸಿಗುವ ಅಗ್ನಿವೀರ್ ಅವಕಾಶವನ್ನು ಎಲ್ಲಾ ಅರ್ಹ ಅಭ್ಯರ್ಥಿಗಳು ಸದುಪಯೋಗಿಸಿಕೊಳ್ಳಬೇಕು ಮತ್ತು ಅದರಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಪಡೆದುಕೊಳ್ಳಿ. ಇನ್ನೇನು ಕೆಲವೇ ದಿನಗಳಲ್ಲಿ ಅಗ್ನಿವೀರ್ ವಾಯು ನೇಮಕಾತಿಯ ಅರ್ಜಿ ಸಲ್ಲಿಸುವಿಕೆ ಶುರುವಾಗಲಿದೆ. ಆಸಕ್ತರು ತಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

careerlive news Notification
careerlive news Notification
careerlive news Notification

ನಮ್ಮ ವೆಬ್ಸೈಟ್ ನ ನೋಟಿಫಿಕೇಶನ್ ನ್ನು Enable ಮಾಡಿ. ಇದರಿಂದ ನೀವು ಪ್ರಸ್ತುತ ನೇಮಕಾತಿಯ Application Form ಬಂದ ತಕ್ಷಣ ಮೊದಲು ತಿಳಿದುಕೊಳ್ಳಬಹುದು. Notification On ಮಾಡಲು, ನಮ್ಮ ಬ್ಲಾಗ್ ಪೋಸ್ಟ್ ಓಪನ್ ಆದ ತಕ್ಷಣ ಬರುವ ಈ popup ಅನ್ನು ”Close” ಎಂದು ಒತ್ತಿ ಕ್ಲೋಸ್ ಮಾಡಿ. ನಂತರ  ಬರುವ ಮತ್ತೊಂದು Popup ನಲ್ಲಿ ”Allow” ಒತ್ತಿ. 


ಒಂದು ವೇಳೆ ಈ Popup ಬರದಿದ್ದರೆ ನಿಮ್ಮ ಸ್ಕ್ರೀನ್ ನ ಕೆಳಗೆ ಎಡ ಬದಿಯಲ್ಲಿ ನೀಲಿ ಬಣ್ಣದಲ್ಲಿ ಬಿಳಿ ಬಣ್ಣದ ಗಂಟೆ ಚಿತ್ರವನ್ನು ಒತ್ತಿ ”Subscribe” ಅನ್ನು ಕ್ಲಿಕ್ ಮಾಡಿ. Notification enable ಆಗುತ್ತದೆ. ಇದು ಸಂಪೂರ್ಣ ಉಚಿತ. 

FAQ

A: No, Instead of Provident Fund, agniveer will get Compensation in the name of ‘’Seva Nidhi Fund’’ after completing four years of service. . 

A: For Male Height must be  152.5 cms. And Female Candidate should be 152cms

A: You need to apply online for Agnipath 

A: Candidates must be possess PUC (10+2) in science

A: Yes. After successfully completing the four year term, Agniveer can apply for permanent posts. 25% of the agniveer may get the chance to become permanent soldiers of the Indian army, navy or air force.


Share the Info

Leave a Comment