Karnataka Bank Data Engineer Recruitment 2024: Data Engineer Post, Qualification, Eligibility Criteria, Salary, How to Apply

Share the Info

ಕರ್ನಾಟಕ ಬ್ಯಾಂಕಿನಲ್ಲಿ ಉದ್ಯೋಗಾವಕಾಶ, Data Engineer Recruitment 2024 

Karnataka Bank Data Engineer Recruitment 2024: ಪ್ಯಾನ್ ಇಂಡಿಯಾ ಹೆಜ್ಜೆ ಗುರುತನ್ನು ಹೊಂದಿರುವ ಕರ್ನಾಟಕ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಕರ್ನಾಟಕ ಬ್ಯಾಂಕ್ ಪ್ರತಿ ಸಲವೂ ತನ್ನ ಸಮರ್ಥ ಟೀಮ್ ಗೆ ಸೇರಲು ಕ್ರಿಯಾತ್ಮಕ ವ್ಯಕ್ತಿಗಳಿಗೆ ಅವಕಾಶಗಳನ್ನು ಹಿಂದಿನಿಂದಲೂ ನೀಡುತ್ತಾ ಬಂದಿದೆ. ಈ ಸಲ ನೀವು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. 

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಮಂಗಳೂರಿನಲ್ಲಿ ದಿನಾಂಕ 18 ಫೆಬ್ರವರಿ 1924 ರಂದು Karnataka Bank ನ್ನು ಸ್ಥಾಪಿಸಲಾಯಿತು. ಇದು ಭಾರತದಲ್ಲಿನ ಪ್ರಮುಖವಾದ ‘ಎ’ ವರ್ಗದ ವಾಣಿಜ್ಯ ಬ್ಯಾಂಕ್ ಎಂದು ಈಗ ಗುರುತಿಸಿಕೊಂಡಿದೆ. ಪ್ರಸ್ತುತ Karnataka Bank ನ ಬೆಂಗಳೂರಿನ TDH Office ನಲ್ಲಿ MIS Department ನಲ್ಲಿ ಖಾಲಿ ಇರುವ Data Engineer Post ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಹಾಗೆಯೇ ಹೆಚ್ಚಿನ ಮಾಹಿತಿಯನ್ನು Karnataka Bank Recruitment 2024 Notificationನಲ್ಲಿ ತಿಳಿದುಕೊಳ್ಳಬಹುದಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group

ನಾವು ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ತಮ್ಮ ಕನಸಿನ ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮ Careerlive.in ವೆಬ್ಸೈಟ್ ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಈಗಾಗಲೇ ಹಲವು ಜನರು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ Whatsapp Group ಮತ್ತು Whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು Whatsapp group ಹಾಗೂ Whatsapp Channel, Telegram Channel ಗೆ ಸೇರಿಕೊಳ್ಳಿ.  

Basic information about Karnataka Bank Data Engineer Recruitment 2024

Post nameData Engineer
OrganizationKarnataka Bank Limited
Number of vacancies11
Application ModeOffline/Postal/Email
QualificationGraduate / Post Graduate
Interview MethodInterview
SalaryRs 48,480- Rs 85,920/-
Age Limit30 years
Last date26th July 2024
Karnataka Bank Data Engineer Recruitment 2024

Eligibility Criteria for Data Engineer in Karnataka Bank Recruitment 2024

Data Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಪ್ರೊಬೇಷನರಿ ಅವಧಿಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು.

Qualification: 

Data Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BE/BTech/B.Sc. in Computer Science, BCA ನಂತಹ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಇಲ್ಲವೇ MCA MTech ನಂತಹ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕಾಗುತ್ತದೆ. ಈ ಬಗೆಗೆ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಬೇಕಾಗುತ್ತದೆ.

Age Limitation:

Data Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ದಿನಾಂಕ 01-06-2024ರಂತೆ 30 ವರ್ಷದೊಳಗಿರಬೇಕಾಗುತ್ತದೆ.

Age Relaxation:

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯಲ್ಲಿನ ವಿನಾಯಿತಿಯ ಬಗೆಗೆ ಸದ್ಯ ಯಾವುದೇ ಮಾಹಿತಿಯನ್ನು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನೀಡಿಲ್ಲ. ಹೆಚ್ಚಿನ ವಿವರವಾದ ಮಾಹಿತಿಯನ್ನು ಈ ಲೇಖನದ ಕೆಳಗೆ ನೀಡಿರುವ Karnataka Bank Data Engineer Recruitment 2024 for the post of Data Engineer ನಲ್ಲಿ ಇಲ್ಲವೇ ಬ್ಯಾಂಕ್ ನ ಅಧೀಕೃತ ಜಾಲತಾಣದಲ್ಲಿ ಕಾಣಬಹುದಾಗಿದೆ.

Experience required for Karnataka Bank Data Engineer Recruitment 2024

Data Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ನಂತರ Oracle, SQL, MS-SQL ನಂತಹ ಕಂಪ್ಯೂಟರ್ ಸಂಬಂಧಿತ ವಿಷಯದಲ್ಲಿ ಕನಿಷ್ಠ 2 ವರ್ಷಗಳಾದರೂ ಕೆಲಸ ಮಾಡಿದ ಅನುಭವವನ್ನು ಪಡೆದಿರಬೇಕಾಗುತ್ತದೆ.

Required Document and Certificates for Karnataka Bank Data Engineer Recruitment 2024

  • Curriculum Vitae (CV)  /  Resume 
  • Adhar Card
  • Voter ID
  • Educational Qualification Certificates
  • Experience Certificates
  • NOC certificates
  • Birth  Certificate /  Birth Proof Certificates
  • Caste /  Category Certificate
  • PWDs Certificates
  • Recent Passport size Photographs

Other Important Instructions for Karnataka Bank Data Engineer Recruitment 2024

  • ಅಭ್ಯರ್ಥಿಯ ವಿವರವುಳ್ಳ CV / Resume ಯನ್ನು ಇ-ಮೇಲ್ ಮೂಲಕವೇ ಮೇಲೆ ತಿಳಿಸಿದ ಇ-ಮೇಲ್ ಐಡಿ ಗೆ ಕಳುಹಿಸತಕ್ಕದ್ದು.
  • ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಮತ್ತು ಅರ್ಹತಾ ಮಾನದಂಡಗಳನ್ನು ಸರಿಯಾದ ಭರ್ತಿ ಮಾಡದೇ ಇರುವ ಅರ್ಜಿಗಳನ್ನು/ Resume ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
  • ಆಯ್ಕೆಗೊಂಡ ಅಭ್ಯರ್ಥಿಗಳು DA, HRA / HRA ಬದಲಿಗೆ Bank quarters, ಸಾಗಣೆ ಭತ್ಯೆಗಳು ಮತ್ತು ಇತರ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭತ್ಯೆಗಳು ಮತ್ತು ಅಗತ್ಯತೆಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
  • ಬ್ಯಾಂಕ್ ನಿರ್ದೇಶೀಸಿದಂತೆ ಅಭ್ಯರ್ಥಿಗಳು ಬೆಂಗಳೂರು ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
  • ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಹತಾ ಮಾನದಂಡಗಳು, ಇತರ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
  • ಅಭ್ಯರ್ಥಿಗಳು ಕಳುಹಿಸಿದ ಯಾವುದೇ ಅರ್ಜಿಯನ್ನು ಕಾರಣ ನೀಡದೆ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
  • ಅರ್ಹತೆ, ಸಂದರ್ಶನ, ನಡವಳಿಕೆಯನ್ನು ಗಮನದಲ್ಲಿರಿಸಿಕೊಂಡು ಮಾಡುವ  ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯಾಂಕ್ ನ ನಿರ್ಧಾರವು ಅಂತಿಮವಾಗಿರುತ್ತದೆ

Selection Process of Karnataka Bank Data Engineer Recruitment 2024

Karnataka Bank Data Engineer Recruitment 2024 ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲನೇಯ ಹಂತದಲ್ಲಿ ಅವರ ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿ ಹಾಗೂ ವೈಯುಕ್ತಿಕ ಕೌಶಲ್ಯಗಳು ಇವೆಲ್ಲವೆನ್ನಾ ಗಣನೆಗೆ ತೆಗೆದುಕೊಂಡು ಸಂದರ್ಶನದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಾಗುತ್ತದೆ.

ಹೀಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಅಥವಾ ಬ್ಯಾಂಕ್ ಸೂಚಿಸಿದ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಈ ಹಂತದಲ್ಲಿ ಸಂದರ್ಶನ ಮತ್ತು ಸಂವಾದದ ಮೂಲಕ ಅಭ್ಯರ್ಥಿಗಳ ಕೌಶಲ್ಯವನ್ನು ಪರೀಕ್ಷೆ ಮಾಡಿ ನೇಮಕಾತಿಗಾಗಿ ಆಯ್ಕೆ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಹಾಗೆಯೇ ಬ್ಯಾಂಕ್, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳು ಮತ್ತು ಅಭ್ಯರ್ಥಿಗಳು ತೃಪ್ತಿಕರ ಹಿನ್ನಲೆಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ನಂತರವೇ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. 

Probationary Period of selected candidates for Data Engineer

Data Engineer ಹುದ್ದೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಒಂದು ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ. ಪ್ರೊಬೇಷನರಿ ಅವಧಿಯಲ್ಲಿ ಅಭ್ಯರ್ಥಿಗಳು ಬ್ಯಾಂಕ್ ನ ನಿಯಮಗಳು ಮತ್ತು ನಿಬಂಧನೆಗೊಳಪಟ್ಟು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.  ಹೀಗೆ ಒಂದು ವರ್ಷಗಳ ಪ್ರೊಬೇಷನರಿ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಖಾಯಂ ಆಗಿ ನೇಮಕಾತಿ ಮಾಡಲಾಗುವುದು.

How to Apply for Data Engineer in Karnataka Bank Recruitment 2024

Karnataka Bank Data Engineer Recruitment 2024 ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಸ್ವವಿವರವುಳ್ಳ Curriculum Vitae (CV)/Resume ಯನ್ನು ತಯಾರಿಸಬೇಕಾಗುತ್ತದೆ. 

ಹೀಗೆ ತಯಾರಿಸಿದ Curriculum Vitae (CV)/Resume ನಲ್ಲಿ ಅಭ್ಯರ್ಥಿಯ ವಯಸ್ಸಿನೊಂದಿಗೆ ಜನನ ದಿನಾಂಕ, ವೈವಾಹಿಕ ಸ್ಥಿತಿ, ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿಯನ್ನು ಪಡೆದಿದ್ದರೆ ಅದರ ವಿವರಗಳು, ವೈಯುಕ್ತಿಕ ಕೌಶಲ್ಯಗಳು, ಪ್ರಸ್ತುತ / ನಿರೀಕ್ಷಿತ  ವೇತನ (CTC) ಬಗೆಗಿನ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು ಉಲ್ಲೇಖಿಸಬೇಕಾಗುತ್ತದೆ.

ಸ್ವವಿವರವುಳ್ಳ ಈ CV / Resume ಯನ್ನು ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರದೊಂದಿಗೆ recruitment@ktkbank.com ಇ-ಮೇಲ್ ಐಡಿ ಗೆ ದಿನಾಂಕ 26-07-2024 ರೊಳಗೆ ತಲುಪುವಂತೆ ಕಳುಹಿಸಬೇಕಾಗುತ್ತದೆ.

Important Links of Karnataka Bank Data Engineer Recruitment 2024

Karnataka Bank Data Engineer Recruitment 2024 NotificationDownload Now
KARNATAKA BANK Official WebsiteVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

FAQ

Q: What is the last date for application submission Data Engineer Post recruitment?

A: 26th July 2024

Q: What is the place of posting of date engineer?

A: Bangalore, Karnataka 

Q: What is the time for the probationary period date engineer post?

A: 1 year

Q: What is the maximum age limit for data engineer post?

A: 30 years

Q: What is the Pay scale of Data Engineer in Karnataka Bank

A: Rs 48,480- Rs 85,920/-


Share the Info

Leave a Comment