SCDCC Bank Recruitment 2024: Second Division Clerk Posts in SCDCC Bank, Last Date, Eligibility, Qualification, How to Apply

Share the Info

SCDCC Bank Recruitment 2024: Information about Jobs in SCDCC bank

SCDCC Bank Recruitment 2024: SCDCC (South Canara District Central Co Operative Bank), ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಾದ್ಯಂತ ಹೆಸರಾಗಿರುವ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿದೆ. 1913 ರಂದು ಈ ಬ್ಯಾಂಕ್ ನ್ನು ನೊಂದಾಯಿಸಲಾಯಿತು ಮತ್ತು 1914ರ ಹೊತ್ತಿಗೆ ತನ್ನ ಔಪಚಾರಿಕ ಕಾರ್ಯವನ್ನು ಪ್ರಾರಂಭಿಸಿ ಇದೀಗ ಜಿಲ್ಲೆಯಾದ್ಯಂತ 113 ಶಾಖೆಗಳವರೆಗೆ ವಿಸ್ತರಿಸಿದೆ. SCDCC ಬ್ಯಾಂಕ್ ರೈತರ ವಿವಿಧ ಸಾಲದ ಅಗತ್ಯಗಳನ್ನು ಪೂರೈಸುತ್ತಾ ಕೃಷಿ ವಲಯಕ್ಕೆ ಆದ್ಯತೆಯನ್ನು ನೀಡುತ್ತಾ ಬಂದಿದೆ. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬ್ಯಾಂಕ್ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. 

ಪ್ರಸ್ತುತವಾಗಿ ಇಲ್ಲಿ ಖಾಲಿ ಇರುವ ಸುಮಾರು 123 ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ Online ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗೆಗಿನ ಸೂಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಕಾಣಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನದ ಕೊನೆಯಲ್ಲಿರುವ SCDCC Bank Limited Recruitment Notification 2024 ಮತ್ತು Guidelines for filling up the Online Application ನಲ್ಲಿ ಕಾಣಬಹುದಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group

ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.

Basic information about SCDCC Bank Recruitment 2024

Post nameSecond Division Clerk
OrganizationSouth Canara District Central Co Operative Bank
Number of Vacancies123
QualificationGraduation / Post Graduation
Application ModeOnline
Application FeesRs.1180/-
SalaryRs.24,910- Rs.55,655
Age Limit40 years
Interview MethodWritten Test and Interview
Last date18th July 2024
SCDCC Bank Recruitment 2024

Eligibility Criteria to apply for SCDCC Bank Recruitment 2024

Second Division Clerk ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅನುಸರಿಸಬೇಕಾದ ಸೂಚನೆಗಳು, ವಿದ್ಯಾರ್ಹತೆ, ವಯೋಮಿತಿ ಹಾಗೂ ವಯೋಮಿತಿಯಲ್ಲಿನ ಸಡಿಲಿಕೆಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ಕಾಣಬಹುದಾಗಿದೆ.

Education Qualification:  

ದ್ವಿತೀಯ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಅಂಕಗಳೊಂದಿಗೆ 3 ವರ್ಷಗಳ ಪದವಿಯನ್ನು ಪೂರೈಸಿರಬೇಕಾಗುತ್ತದೆ.

ಅಥವಾ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 45% ಅಂಕಗಳೊಂದಿಗೆ ಪಡೆದಿರಬೇಕಾಗುತ್ತದೆ.

ಇದರೊಂದಿಗೆ ಅಭ್ಯರ್ಥಿಗಳು Computer Operations ಮತ್ತು Applications ನ ಜ್ಞಾನದೊಂದಿಗೆ 6 ತಿಂಗಳ Computer diploma ಅಥವಾ Computer Training ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. Computer Science ನಲ್ಲಿ ಪದವಿಯನ್ನು ಪಡೆದ ಅಭ್ಯರ್ಥಿಗಳಿಗೆ ಈ ಷರತ್ತಿನಲ್ಲಿ ವಿನಾಯಿತಿ ನೀಡಲಾಗುತ್ತದೆ.

Age Limitation:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ದಿನಾಂಕ 18-07-2024 ರಂತೆ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ 40 ವರ್ಷದೊಳಗಿನವರಾಗಿರಬೇಕು. ಅಭ್ಯರ್ಥಿಯು ಹಿಂದುಳಿದ ಸಮುದಾಯ ಮತ್ತು ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಅವರ ಗರಿಷ್ಠ ವಯೋಮಿತಿಯು 38 ವರ್ಷದೊಳಗಿರಬೇಕಾಗುತ್ತದೆ. ಇತರ ಸಮುದಾಯದ ಅಭ್ಯರ್ಥಿಗಳ ವಯೋಮಿತಿ 35 ವರ್ಷದೊಳಗಿರಬೇಕಾಗುತ್ತದೆ

Age Relaxation:

Second Division Clerk ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಜಿ ಸೈನಿಕರಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಯೋಮಿತಿಗಿಂತ ಅವರು ಸೇವೆ ಸಲ್ಲಿಸಿದ ಅವಧಿಯಷ್ಟು ಅಥವಾ ಹೆಚ್ಚುವರಿ 10 ವರ್ಷಗಳ ವಿನಾಯಿತಿಯನ್ನು ನೀಡಲಾಗುತ್ತದೆ.

Other Important Instructions:

  • ಅಭ್ಯರ್ಥಿಯು ಕರ್ನಾಟಕ ರಾಜ್ಯದ ಮಾನ್ಯತೆ ಹೊಂದಿದ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಮತ್ತು ಎಲ್ಲಾ ಪದವಿಯ ಎಲ್ಲಾ ಸೆಮಿಸ್ಟರ್ ಗಳ ಅಂಕಪಟ್ಟಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ.
  • ಓರ್ವ ಅಭ್ಯರ್ಥಿಯು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸತಕ್ಕದ್ದು.
  • ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ / ದಿನ ಭತ್ಯೆಯನ್ನು ನೀಡಲಾಗುವುದಿಲ್ಲ.
  • ನಿಗದಿ ಪಡಿಸಿದ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರ ಯಾವುದೇ ಸಮಾಂತರ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
  • ಲಿಖಿತ ಪರೀಕ್ಷೆಗೆ ಅರ್ಹವಿರುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ವೆಬ್ಸೈಟ್ ನಲ್ಲಿ ತಿಳಿಸಲಾಗುವುದು.
  • ಅರ್ಹ ಅಭ್ಯರ್ಥಿಗಳಿಗೆ ಇ-ಮೇಲ್ ಮುಖಾಂತರ ಪ್ರವೇಶ ಪತ್ರ (SCDCC Admit Card)ನ್ನು ಕಳುಹಿಸಿಕೊಡಲಾಗುವುದು. ಈ ಪ್ರವೇಶ ಪತ್ರವನ್ನು ಲಿಖಿತ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.
  • ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸತಕ್ಕದ್ದು. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹಾಗೂ ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಆಗಿಂದಾಗ್ಗೆ ನೀಡುವ ಸೂಚನೆಗಳನ್ನು ಗಮನಿಸತಕ್ಕದ್ದು.
  • ಈಗಾಗಲೇ 07-08-2023ರ ಪ್ರಕಟನೆಯ ಮೂಲಕ ಆಹ್ವಾನಿಸಲಾದ ಅರ್ಜಿಗಳಲ್ಲಿ ಲಿಖಿತ ಪರೀಕ್ಷೆಗೆ ಅರ್ಹವಾಗಿರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಲಿಖಿತ ಪರೀಕ್ಷೆಗೆ ಅರ್ಹ / ಅನರ್ಹ ಎಂಬ ಬಗೆಗಿನ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ತಮ್ಮ ನೊಂದಣಿ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಬಹುದು.

Required Document and Certificates 

  • ಭರ್ತಿಗೊಳಿಸಿದ ಅಪ್ಲಿಕೇಷನ್ ಫಾರ್ಮ್ ನ ಪ್ರತಿ
  • ಅರ್ಜಿ ಶುಲ್ಕ ಪಾವತಿ ರಶೀದಿ ಅಥವಾ ಡಿ.ಡಿ ಯ ಪ್ರತಿ
  • ಆಧಾರ ಕಾರ್ಡ್
  • ವೋಟರ್ ಐಡಿ
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ವೃತ್ತಿ ಅನುಭವದ ಪ್ರಮಾಣ ಪತ್ರ
  • ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
  • ಬಿಡುಗಡೆ ಪ್ರಮಾಣ ಪತ್ರ (ಮಾಜಿ ಸೈನಿಕರಾಗಿದ್ದಲ್ಲಿ)
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಅಂಗವೈಕಲ್ಯ ಪ್ರಮಾಣ ಪತ್ರ
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

How to Apply for SCDCC Bank Recruitment 2024

SCDCC Bank Recruitment 2024, Second Division Clerk ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SCDCC Bank Official Website  www.scdccbank.com ನಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನೇಮಕಾತಿ ಪ್ರಕಟನೆಗಳು ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದಿ ಮುಂದುವರಿಯಬೇಕಾಗುತ್ತದೆ. 

ಅರ್ಜಿಗಳನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಸ್ವಯಂ ದೃಢೀಕೃತ ಅಂಕಪಟ್ಟಿಗಳು, ಮತ್ತು ಅದರೊಂದಿಗೆ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. SCDCC Bank Recruitment 2024 ಅರ್ಜಿಯನ್ನು ಭರ್ತಿಗೊಳಿಸುವ ಸಮಯದಲ್ಲಿ ಅಭ್ಯರ್ಥಿಯು ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿಯನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. 

ಅರ್ಜಿಯನ್ನು ಭರ್ತಿಗೊಳಿಸಿದ ನಂತರ “Preview Application” ನ್ನು  ಬಳಸಿ ಅರ್ಜಿಯನ್ನು ಮರುಪರಿಶೀಲಿಸಿ ನಂತರವೇ Submit Application ಬಟನ್ ಒತ್ತಿ ಅರ್ಜಿಯನ್ನು ಒಪ್ಪಿಸಬೇಕಾಗುತ್ತದೆ. 

ಅರ್ಜಿಯನ್ನು ಒಪ್ಪಿಸಿದ ನಂತರ Application Submitted Successfully ಎಂಬ ಸಂದೇಶ ಬರುವುದು. ನಂತರ download ಲಿಂಕ್ ನ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.

ನಂತರ ಅರ್ಜಿಶುಲ್ಕವನ್ನು SCDCC BANK ನ ಯಾವುದೇ ಶಾಖೆಯಲ್ಲಿ ನಗದು ಪಾವತಿ ರಶೀದಿ ಮೂಲಕ ಅಥವಾ ದ.ಕ. ಜಿಲ್ಲಾ ಕೇಂದ್ರ  ಸಹಕಾರಿ ಬ್ಯಾಂಕ್ ನಿ., ಮಂಗಳೂರು ಹೆಸರಿಗೆ ಪಡೆದ ಡಿ.ಡಿ. ಮೂಲಕ ಪಾವತಿಸಬಹುದು.

ಮುದ್ರಿತ ಅರ್ಜಿ ನಮೂನೆ, ಶುಲ್ಕ ಪಾವತಿ ರಶೀದಿ/ ಡಿ.ಡಿ. ಹಾಗೂ ಅಂಕಪಟ್ಟಿ, ಮೀಸಲಾತಿ, ಅನುಭವ ಪ್ರಮಾಣ ಪತ್ರ ಇತ್ಯಾದಿಗಳನ್ನು ಸ್ವಯಂ ದೃಢೀಕರಿಸಿ ದಿನಾಂಕ 18-07-2024ರ ಅಪರಾಹ್ನ 4.30 ರೊಳಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. 

ಮುಖ್ಯ ಕಾರ್ಯನಿರ್ವಹಣಾಧಿಕಾರಿ 

ದ.ಕ. ಜಿಲ್ಲಾ ಕೇಂದ್ರ  ಸಹಕಾರಿ ಬ್ಯಾಂಕ್ ನಿ., 

ಕೊಡಿಯಾಲ್ ಬೈಲ್,  ಮಂಗಳೂರು -575003

ಆನ್ಲೈನ್ ಅರ್ಜಿ ಸಲ್ಲಿಸುವಾಗ ಯಾವುದಾದರೂ ತಾಂತ್ರಿಕ ತೊಂದರೆ ಉಂಟಾದಲ್ಲಿ ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ದೂರವಾಣಿ ಸಂಖ್ಯೆ : 0824-2440381, 2440882

Selection Process SCDCC Bank Recruitment 2024?

SCDCC Bank Recruitment 2024 Second Division Clerk ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ, SCDCC  ಬ್ಯಾಂಕ್ ಕಮಿಟಿಯಿಂದ ಅಭ್ಯರ್ಥಿಯು ಪಡೆದ ವಿದ್ಯಾರ್ಹತೆ ಮತ್ತು ಕೌಶಲ್ಯಗಳ ಆಧಾರದ ಮೇಲೆ ಪ್ರಥಮ ಹಂತದ ಆಯ್ಕೆ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ. 

ಹೀಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು 200 ಅಂಕಗಳನ್ನೊಳಗೊಂಡ ಲಿಖಿತ ಪರೀಕ್ಷೆಗಾಗಿ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ  ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ತಯಾರಿಸಿ 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಹೀಗೆ ಸಂದರ್ಶನದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಹುದ್ದೆಗೆ ನೇಮಕಾತಿ ಮಾಡಲಾಗುವುದು.

How to Pay Application Fees for SCDCC Bank Recruitment 2024?

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು SCDCC ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ನಗದು ಪಾವತಿ ರಶೀದಿ ಅಥವಾ ಡಿ.ಡಿ. ಮೂಲಕ ಪಾವತಿಸಬಹುದಾಗಿದೆ.

ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಅಭ್ಯರ್ಥಿಗಳು ರೂ.500 + GST ರೂ.90  ಒಟ್ಟು ರೂ.590 ಮತ್ತು ಇತರ  ಅಭ್ಯರ್ಥಿಗಳು ರೂ.1000  + GST ರೂ.180  ಒಟ್ಟು ರೂ.1180 ಪಾವತಿ ಮಾಡಬೇಕಾಗುತ್ತದೆ.

Important Links

SCDCC BANK Recruitment 2024 NotificationDownload Now
SCDCC BANK Official WebsiteVisit Now
SCDCC BANK Recruitment 2024 Online ApplicationApply Now
SCDCC BANK Login Page Using Application NumberLogin Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelFollow Now
Careerlive Telegram ChannelJoin Now

Read Also:

FAQ

Q: What is the last date of application submission for SCDCC Bank Recruitment 2024?

A: 18th July 2024

Q: Does SCDCC Bank pay any TA/DA?

A: No

Q: Is there any reservation for PWDs in the Second Division Clerk recruitment in SCDCC?

A: A certificate from the competent Authority as per the provisions currently in force should be attached by the physically handicapped candidates.

Q: What is the maximum age limit for Second Division Clerk post in SCDCC Recruitment 2024?

A: 40 Years

Q: What is the full form of SCDCC?

A: South Canara District Central Co Operative Bank

Q: What is the contact number to reach SCDCC Bank for any enquiry?

A: 0824-2440381, 2440882

Q: What is the SCDCC bank recruitment exam date?

A: Not Yet announced


Share the Info

Leave a Comment